ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಂಡನ ಮೈಬಣ್ಣ ಕಪ್ಪು ಎಂದು ಪತ್ನಿಯೊಬ್ಬಳು ಗಂಡನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಂದಿದ್ದಾರೆ.
ಉತ್ತರಪ್ರದೇಶದ ಬಿಚೆಟ್ಟಾ ಗ್ರಾಮದಲ್ಲಿ ನಾಲ್ಕು ವರ್ಷದ ಹಿಂದೆ ಪ್ರಕರಣ ನಡೆದಿದ್ದು, ಸಂಭಾಲ್ ನ್ಯಾಯಾಲಯ ಮಹಿಳೆಗೆ 25 ಸಾವಿರ ರೂಪಾಯಿ ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ನೀಡಿದೆ.
ಸತ್ಯವೀರ್ ಕಪ್ಪಿದ್ದಾನೆಂದು ಪತ್ನಿ ಪ್ರೇಮಶ್ರೀ ಬೆಳಗಿನ ಜಾವ ಮಲಗಿದ್ದ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಳು. ಸತ್ಯವೀರ್ ಸಹೋದರ ಕೋರ್ಟ್ ಮೊರೆ ಹೋಗಿದ್ದರು ಎನ್ನಲಾಗಿದೆ.