Sunday, December 10, 2023

Latest Posts

ಜೀವಕ್ಕೆ ಕಂಟಕವಾದ ಜೀವಜಲ: ಈಕೆಯ ಬಾಳಿಗೆ ನೀರೇ ವಿಲನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 
 
ಮನುಷ್ಯನಿಗೆ ಅಲರ್ಜಿಗಳು ಸಾಮಾನ್ಯ. ಆದ್ರೆ ಕೆಲವು ಅಲರ್ಜಿಗಳು ಜೀವನಕ್ಕೆ ಕಂಟಕವಾಗುತ್ತೆ . ಅದ್ರಲ್ಲೂ ಜೀವನಕ್ಕೆ ಅತೀ ಮುಖವಾಗದ ಜೀವಜಲ ಅಲರ್ಜಿಯಾಗಿ ದೇಹಕ್ಕೆ ಕಂಟಕವಾದರೆ? ಹೇಗೆ…

ಹೌದು ಅಮೆರಿಕಾದ ಮಹಿಳೆಯೊಬ್ಬಳು ನೀರಿನ ಅಪರೂಪದ ಅಲರ್ಜಿಯಿಂದ ಬಳಲುತ್ತಿದ್ದಾಳೆ.

ಟೆಸ್ಸಾ ಹ್ಯಾನ್ಸೆನ್ ಸ್ಮಿತ್ ಎಂಬಾಕೆ ಈ ಭಯಂಕರ ಅಲರ್ಜಿಗೆ ಗುರಿಯಾಗಿದ್ದು, ಸ್ನಾನ ಮಾಡುವುದು, ಮಳೆಯಲ್ಲಿ ನೆನೆಯುವುದು ಆಕೆಗೆ ನಿಷಿದ್ಧ. ಇನ್ನು ದಾಹವಾದರೆ ಹನಿ ನೀರು ಸಹ ಬಾಯಿಗೆ ಬಿಟ್ಟುಕೊಳ್ಳುವಂತಿಲ್ಲ.

‘ಅಕ್ವಾಜೆನಿಕ್ ಉರ್ಟಿಕೇರಿಯಾ’ ಎಂಬ ಅಪರೂಪದ ಅಲರ್ಜಿ ಆಕೆಗೆ ಕಾಡುತ್ತಿದೆ.

ಟೆಸ್ಸಾ ಹ್ಯಾನ್ಸೆನ್ ಸ್ಮಿತ್ ಪ್ರಸ್ತುತ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಆಕೆ ಎಂಟನೇ ವಯಸ್ಸಿನವಳಿದ್ದಾಗ ನೀರು ಕುಡಿದರೆ ಮೈಮೇಲೆ ಬೊಬ್ಬೆಗಳು ಬರುತ್ತಿದ್ದವು. ಮೈಮೇಲೆ ನೀರು ತಾಕಿದರೂ ಅದೇ ಸ್ಥಿತಿ. ಆಕೆ ಮನೆಯಲ್ಲಷ್ಟೇ ಅಲ್ಲ, ಕಡೆಗೆ ಮನೆಯಿಂದ ಆಚೆ ಹೋಗೋಣವೆಂದರೆ ನಡೆಯುವಾಗಿ ಬೆವರು ಬಂದರೆ ಅದಕ್ಕೂ ಅಲರ್ಜಿಯಾಗುತ್ತಿತ್ತು.

ಪ್ರಸ್ತುತ ಆಕೆ ಸ್ನಾನ ಮಾಡದ ಸ್ಥಿತಿಗೆ ಈ ಕಾಯಿಲೆ ದೂಡಿದೆ. ನೀರು ಅಷ್ಟೇ ಅಲ್ಲ, ಮಂಜಿನ ಹನಿಗಳು ದೇಹಕ್ಕೆ ತಾಗಿದರೂ ಇಡೀ ಶರೀರ ಬೊಬ್ಬೆಗಳಾಗಿ ಉರಿಯುತ್ತದೆ. ಗಂಟಲಿಗೆ ನೀರು ಬಿದ್ದರೆ ಗಂಟಲಿನದೂ ಅದೇ ಸ್ಥಿತಿ.

ಇತ್ತ ಆಕೆ ತಾಯಿ ವೈದ್ಯರಾದರೂ ತನ್ನ ಮಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿಲ್ಲ.ಅವಳು ಸುಮಾರು 8 ವರ್ಷ ವಯಸ್ಸಿನವಳಿದ್ದಾಗ ‘ನೀರಿನ ಅಲರ್ಜಿ’ ಎದುರಾಯಿತು. ಅದು ವರ್ಷಗಳು ಉರುಳುತ್ತಿದ್ದಂತೆ ತೀವ್ರವಾಗಿ ಆರೋಗ್ಯ ಹದಗೆಟ್ಟಿದೆ. ತನ್ನ ದಿನಗಳನ್ನು ಮನೆಯೊಳಗೆ ಕಳೆಯುತ್ತಾಳೆ, ಯಾವುದಾದರೂ ಚಿತ್ರ ಬಿಡಿಸುವುದು, ಬೆಕ್ಕುಗಳೊಂದಿಗೆ ಆಟವಾಡುವುದರಲ್ಲಿ ತಲ್ಲೀನಳಾಗುತ್ತಾಳೆ ಎಂದು ಆಕೆ ತಾಯಿ ಹೇಳುತ್ತಾರೆ.

ಇತ್ತೀಚೆಗೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ರಕ್ತಕೊರತೆಯನ್ನು ಸರಿಪಡಿಸಲಾಯಿತಾದರೂ ರಕ್ತದ ಹರಿವು ನಿರ್ಬಂಧಿಸಲ್ಪಟ್ಟಿದ್ದರಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿದ್ದಳು. ಸತತ ಚಿಕಿತ್ಸೆಯಿಂದ ಈಗ ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ.

ಆಕೆಯ ಇತ್ತೀಚಿನ ಆಸ್ಪತ್ರೆ ವೆಚ್ಚ $100,000 ಆಗಿದೆ. ಇದರಲ್ಲಿ $10,000 ವಿಮೆ ಇದ್ದರೂ, ಕುಟುಂಬಕ್ಕೆ ವೈದ್ಯಕೀಯ ವೆಚ್ಚ ಬರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಆಕೆಯ ಕುಟುಂಬ ‘ಗೋ ಫಂಡ್​ ಮೀ’ ವೆಬ್​ಸೈಟ್​ ಸ್ಥಾಪಿಸಿ ಸಾರ್ವಜನಿಕರಿಂದ ನೆರವಿಗೆ ಕೈ ಚಾಚಿದೆ.

ಟೆಸ್ಸಾ ಜೀವನ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಕೆ ತನ್ನ Instagram ಪುಟವನ್ನು ಲಿವಿಂಗ್ ವಾಟರ್‌ಲೆಸ್ ಅನ್ನು ಅಪರೂಪದ ಪರಿಸ್ಥಿತಿಗಳೊಂದಿಗೆ ಅಭಿಪ್ರಾಯ ಹಂಚಿಕೊಳ್ಳುತ್ತಾಳೆ. ವಿಶ್ವಾದ್ಯಂತ 100 ರಿಂದ 250 ಜನರು ಅಕ್ವಾಜೆನಿಕ್ ಉರ್ಟೇರಿಯಾ ಎದುರಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!