ಫೋರ್ಬ್ಸ್​ ಅಮೆರಿಕ ಸಿರಿವಂತರ ಪಟ್ಟಿ ಎಲೋನ್ ಮಸ್ಕ್ ಟಾಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಫೋರ್ಬ್ಸ್ ನ 2023 ರ ಅಮೆರಿಕದ 400 ಶ್ರೀಮಂತರ ಪಟ್ಟಿಯಲ್ಲಿ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಸಿಇಒ ಎಲೋನ್ ಮಸ್ಕ್ ಸತತ ಎರಡನೇ ವರ್ಷವೂ ಅಗ್ರಸ್ಥಾನದಲ್ಲಿದ್ದಾರೆ.

ಮಸ್ಕ್​ ಅಂದಾಜು 251 ಬಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರೆ. ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಮತ್ತು ಒರಾಕಲ್ ನ ಸಹ ಸಂಸ್ಥಾಪಕ ಮತ್ತು ಸಿಟಿಒ ಲ್ಯಾರಿ ಎಲಿಸನ್ ಮಸ್ಕ್​ ಅವರ ನಂತರದ ಸ್ಥಾನಗಳಲ್ಲಿದ್ದಾರೆ.

ಫೋರ್ಬ್ಸ್ ಪ್ರಕಾರ, ಮಸ್ಕ್ ಅವರ ಸಂಪತ್ತಿನ ಮೌಲ್ಯ ಕಳೆದ ವರ್ಷದಷ್ಟೇ ಇದೆ ಮತ್ತು ಎರಡನೇ ಸ್ಥಾನದಲ್ಲಿರುವ ಬೆಜೋಸ್​ಗಿಂತ ಅವರ ಸಂಪತ್ತು 90 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಬೆಜೋಸ್​ ಅವರ ಸಂಪತ್ತಿನ ಮೌಲ್ಯ ಅಂದಾಜು 161 ಬಿಲಿಯನ್ ಡಾಲರ್ ಆಗಿದೆ. ಆದಾಗ್ಯೂ ಅವರು ತಮ್ಮ ಸಂಪತ್ತನ್ನು ಒಂದೇ ಪ್ರಮಾಣದಲ್ಲಿ ಉಳಿಸಿಕೊಂಡಿದ್ದಾರೆ.

ಫೋರ್ಬ್ಸ್ ಪಟ್ಟಿಯ ಅಗ್ರ 20 ಕಂಪನಿಗಳಲ್ಲಿ ಒಂಬತ್ತು 100 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿವೆ. ಈ ಪ್ರಮಾಣ ಹಿಂದೆಂದಿಗಿಂತಲೂ ಹೆಚ್ಚು. ಕಳೆದ ವರ್ಷ ಕೇವಲ ನಾಲ್ಕು 100 ಬಿಲಿಯನ್ ಡಾಲರ್​ ಕಂಪನಿಗಳು ಪಟ್ಟಿಯಲ್ಲಿದ್ದವು.

ಒರಾಕಲ್​ನ ಎಲಿಸನ್ 158 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅಮೆರಿಕದಲ್ಲಿ ಅತ್ಯಂತ ಹೆಚ್ಚು ಸಿರಿವಂತಿಕೆ ಗಳಿಸಿದ ವ್ಯಕ್ತಿ ಅಲಿಸನ್ ಎಂದು ಪೋರ್ಬ್ಸ್​ ಹೇಳಿದೆ.

ಐದನೇ ಸ್ಥಾನದಲ್ಲಿದ್ದ ಗೂಗಲ್​ನ ಸಹ-ಸಂಸ್ಥಾಪಕ ಲ್ಯಾರಿ ಪೇಜ್ ಈ ವರ್ಷ 21 ಬಿಲಿಯನ್ ಡಾಲರ್ ಶ್ರೀಮಂತರಾಗಿದ್ದಾರೆ. ಗೂಗಲ್​​ ಮಾತೃ ಕಂಪನಿ ಆಲ್ಫಾಬೆಟ್​ನ ಷೇರುಗಳಲ್ಲಿ ಶೇಕಡಾ 26 ರಷ್ಟು ಏರಿಕೆಯಾಗಿರುವುದರಿಂದ ಲ್ಯಾರಿ ಪೇಜ್ ಸಂಪತ್ತು ವೃದ್ಧಿಯಾಗಿದೆ. ಅವರ ಸಂಪತ್ತು ಈಗ 114 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.

ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಈಗ ಅಂದಾಜು 111 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಅಮೆರಿಕದ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, ಗೂಗಲ್ ನ ಮತ್ತೋರ್ವ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ 110 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಏಳನೇ ಸ್ಥಾನದಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!