ಕತ್ರೀನಾ ಜೋಡಿಗೆ ಜೀವ ಬೆದರಿಕೆ: ದೂರುದಾಖಲಿಸಿದ ಕೌಶಲ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಲಿವುಡ್‌ ನ ಹಾಟ್‌ ಜೋಡಿಗಳಲ್ಲೊಂದಾದ ತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಸೋಮವಾರ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಮಗೆ ಬರುತ್ತಿರುವ ಬೆದರಿಕೆ ಸಂದೇಶಗಳ ವಿರುದ್ಧ ದೂರು ನೀಡಲು ನಟ ವಿಕ್ಕಿಕೌಶಲ್‌ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಪೋಲೀಸರು ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅಪರಿಚಿತ ವ್ಯಕ್ತಿಗಳು ಬೆದರಿಕೆ ಹಾಕುತ್ತಿದ್ದಾರೆ ಮತ್ತು ಬೆದರಿಕೆ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆ ವ್ಯಕ್ತಿ ಕತ್ರೀನಾರನ್ನು ಹಿಂಬಾಲಿಸುತ್ತಿದ್ದಾನೆ ಮತ್ತು ಬೆದರಿಕೆ ಹಾಕುತ್ತಿದ್ದಾನೆ ಎಂದು ವಿಕ್ಕಿ ಕೌಶಲ್‌ ಹೇಳಿದ್ದಾರೆ.

ವಿಕ್ಕಿ ಹಾಗೂ ಕ್ಯಾಟ್‌ ಇಬ್ಬರೂ ಕೈಯಲ್ಲೂ ಹಲವಾರು ಚಿತ್ರಗಳಿವೆ ಕತ್ರೀನಾ ತಮ್ಮ ಮುಂಬರುಚ ಚಿತ್ರ ಟೈಗರ್‌ -3 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಲ್ಲದೇ ಇಶಾನ್ ಖಟ್ಟರ್ ಮತ್ತು ಸಿದ್ಧಾಂತ್ ಚತುರ್ವೇದಿ ಅವರೊಂದಿಗೆ ಫೋನ್ ಭೂತ್, ವಿಜಯ್ ಸೇತುಪತಿಯ ಮೆರ್ರಿ ಕ್ರಿಸ್‌ಮಸ್ ಮತ್ತು ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಜೀ ಲೆ ಜರಾ ಚಿತ್ರಗಳಲ್ಲಿಯೂ ನಟಿಸಲಿದ್ದಾರೆ.

ಅವರ ಪತಿ ವಿಕ್ಕಿ ಕೌಶಲ್ ಬಳಿಯೂ ಹಲವು ಚಿತ್ರಗಳಿದ್ದು ಸಾರಾ ಅಲಿ ಖಾನ್ ಅವರೊಂದಿಗೆ ರೋಮ್-ಕಾಮ್, ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರೊಂದಿಗೆ ಸ್ಯಾಮ್ ಬಹದ್ದೂರ್, ಆದಿತ್ಯ ಧರ್ ಅವರ ದಿ ಇಮ್ಮಾರ್ಟಲ್ ಅಶ್ವತ್ಥಾಮ ಮತ್ತು ಶಶಾಂಕ್ ಖೇತಾನ್ ಅವರ ಗೋವಿಂದ ನಾಮ್ ಮೇರಾ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!