ನಮ್ಮ ದೈನಂದಿನ ಜೀವನದಲ್ಲಿ ಕೆಲವು ಸಾಧಾರಣವೆಂದು ಕಾಣುವ ಅಭ್ಯಾಸಗಳು ನಿಧಾನವಾಗಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತವೆ. ಈ ಕೆಳಗಿನ ಕೆಲವೊಂದು ಚಟುವಟಿಕೆಗಳನ್ನು ನಿಯಂತ್ರಿಸದೆ ಹೋದರೆ, ಅದು ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಕಡಿಮೆ ನಿದ್ರೆ
ದಿನಕ್ಕೆ 6-8 ಗಂಟೆಗಳ ನಿದ್ರೆ ಆರೋಗ್ಯಕರ, ಆದರೆ 4 ಗಂಟೆಗಿಂತ ಕಡಿಮೆ ನಿದ್ರೆ ಹೃದಯದ ಸಮಸ್ಯೆ ಮತ್ತು ಡಿಮೆಂಷಿಯಾದ ಅಪಾಯವನ್ನು ಹೆಚ್ಚಿಸುತ್ತದೆ.
ನೀರಿನ ಸೇವನೆ
ದಿನಕ್ಕೆ 2-3 ಲೀಟರ್ ನೀರು ಉತ್ತಮ, ಆದರೆ 6 ಲೀಟರ್‌ಗಿಂತ ಹೆಚ್ಚಾದರೆ ಅದು ದೇಹಕ್ಕೆ ಹಾನಿ ತರುವ ಸಾಧ್ಯತೆ ಇದೆ.
ಮೊಬೈಲ್ ಬಳಕೆ
ದಿನದಲ್ಲಿ 2 ಗಂಟೆ/ಮೊಬೈಲ್ ಬಳಕೆ ಮಾಡಿದರೆ ಬಹಳ ಒಳ್ಳೆಯದು. 6 ಗಂಟೆಗಿಂತ ಹೆಚ್ಚು ಬಳಕೆ ಮಾನಸಿಕ ಒತ್ತಡ ಮತ್ತು ಕಳವಳ ಹೆಚ್ಚಿಸಬಹುದು.
ಕೆಫೀನ್ ಸೇವನೆ
1-2 ಕಪ್ ಕೆಫೀನ್ ಸೇವನೆ ಆರೋಗ್ಯಕರ, ಆದರೆ 10 ಕಪ್‌ಗಿಂತ ಹೆಚ್ಚು ಸೇವನೆ ಹೃದಯದ ಸಮಸ್ಯೆ ಮತ್ತು ಆತಂಕವನ್ನು ಉಂಟುಮಾಡಬಹುದು.
ಬಹಳ ಹೊತ್ತು ಕುಳಿತುಕೊಳ್ಳುವುದು
ದಿನದಲ್ಲಿ 4 ಗಂಟೆ ಕುಳಿತುಕೊಳ್ಳುವುದು ಸಹಜವಾದರೂ, 8 ಗಂಟೆಗಿಂತ ಹೆಚ್ಚು ಕುಳಿತುಕೊಳ್ಳುವುದು ಹೃದಯಾಘಾತ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.
ಸಕ್ಕರೆಯ ಸೇವನೆ
ದಿನಕ್ಕೆ 25 ಗ್ರಾಂ ನಷ್ಟು ಸಕ್ಕರೆಯ ಸೇವನೆ ಸ್ವೀಕಾರಾರ್ಹ, ಆದರೆ ದಿನಕ್ಕೆ 100 ಗ್ರಾಂ ಸೇವನೆ ಮಾಡುವುದು ಇನ್ಸುಲಿನ್ ಪ್ರತಿರೋಧ ಮತ್ತು ದೇಹದ ಉರಿಯೂತಕ್ಕೆ ಕಾರಣವಾಗಬಹುದು.
ಸೋಶಿಯಲ್ ಮೀಡಿಯಾ ಬಳಕೆ
ದಿನದಲ್ಲಿ 1 ಗಂಟೆ ಸೋಶಿಯಲ್ ಮೀಡಿಯಾ ಬಳಕೆ ಮನರಂಜನೆಗೆ ಒಳ್ಳೆಯದು, ಆದರೆ 4 ಗಂಟೆಗಿಂತ ಹೆಚ್ಚು ಬಳಸಿದರೆ ಆಡಿಕ್ಷನ್ ಗೆ ಕಾರಣವಾಗಬಹುದು.
ಹೆಡ್ ಫೋನ್ ಧ್ವನಿ ಮಟ್ಟ
60% ರಷ್ಟು ಸೌಂಡ್ ಕಿವಿಗಳಿಗೆ ಉತ್ತಮವಾದರೂ, 85% ಮೀರಿದರೆ ಕೆಲವು ವರ್ಷಗಳಲ್ಲಿ ನಂತರ ಕಿವಿಗಳಿಗೆ ಹಾನಿಯಾಗಬಹುದು.
ಫಾಸ್ಟ್ ಫುಡ್ ಸೇವನೆ
ವಾರಕ್ಕೆ 1 ಬಾರಿ ಫಾಸ್ಟ್ ಫುಡ್ ತಿಂದರೂ ಪರವಾಗಿಲ್ಲ, ದಿನನಿತ್ಯ ಸೇವನೆ ದೇಹದ ತೂಕ ಹೆಚ್ಚಳ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಸೂರ್ಯನ ಬೆಳಕು
ದಿನ 30 ನಿಮಿಷ ಸೂರ್ಯನ ಬೆಳಕಿಗೆ ಮೈಯೊಡ್ಡುವುದು ಆರೋಗ್ಯಕರ, ಆದರೆ 5 ಗಂಟೆಗಿಂತ ಹೆಚ್ಚು ದೇಹಕ್ಕೆ ಯಾವುದೇ ಸಂರಕ್ಷಣೆ ಇಲ್ಲದೆ ಬಿಸಿಲಿಗೆ ಮೈ ಒಡ್ಡಿದರೆ ಚರ್ಮದ ಕ್ಯಾನ್ಸರ್ ಅಪಾಯವಿದೆ.
ಈ ಸಣ್ಣ-ಸಣ್ಣ ಜೀವನ ಶೈಲಿ ಬದಲಾವಣೆಗಳ ಮೂಲಕ ಆರೋಗ್ಯಕರ ಜೀವನವನ್ನು ಪಡೆಯಬಹುದು!