ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಹಾಗೂ ನಾಸಾ ವಿಜ್ಞಾನಿ, ಗಗನಯಾತ್ರಿ ಬುಚ್ ವಿಲ್ಮೋರ್ ಅವರು ಕಳೆದ 9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲೇ ಇದ್ದರು. ತಾಂತ್ರಿಕ ಸಮಸ್ಯೆಯಿಂದ ಅವರು ಭೂಮಿಗೆ ಬರಲು ಸಾಧ್ಯವಾಗಿರಲಿಲ್ಲ. ಕಡೆಗೂ ಅವರ ಬಾಹ್ಯಾಕಾಶ ವಾಸ ಇಂದಿಗೆ ಕೊನೆಯಾಗಲಿದ್ದು, ಭೂಮಿಗೆ ವಾಪಾಸ್ಸಾಗಲಿದ್ದಾರೆ.
SpaceX Crew-9 ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಮಂಗಳವಾರ IST ಬೆಳಗ್ಗೆ 8:15 ಕ್ಕೆ ಮುಚ್ಚಲಾಗಿದೆ. ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ನಿಕ್ ಹೇಗ್ ಮತ್ತು ರಷ್ಯಾದ ಗಗನಯಾತ್ರೀ ಅಲೆಕ್ಸಾಂಡರ್ ಗೋರ್ಬುನೋವ್ ಅವರೊಂದಿಗೆ, 1:05 am ET (ಮಂಗಳವಾರ ಬೆಳಿಗ್ಗೆ 10:35 IST) ಕ್ಕೆ ISS ನಿಂದ ಹೊರಹೋಗಲು ಮತ್ತು ಭೂಮಿಗೆ ಹದಿನೇಳು ಗಂಟೆಗಳ ಪ್ರಯಾಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ.
NASA ಸಂಸ್ಥೆ SpaceX Crew-9 ನ ವಾಪಸ್ಸಿನ ನೇರ ಪ್ರಸಾರವನ್ನು ಒದಗಿಸುತ್ತಿದೆ. ಇದು ಸೋಮವಾರದಿಂದ https://www.nasa.gov/commercialcrew ನಲ್ಲಿ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಮುಚ್ಚುವಿಕೆಯೊಂದಿಗೆ ಪ್ರಾರಂಭವಾಗಿದೆ. ಈ ಕಾರ್ಯಕ್ರಮವನ್ನು ನಾಸಾದ ಅಧಿಕೃತ ವೆಬ್‌ಸೈಟ್ ಮತ್ತು ಯೂಟ್ಯೂಬ್ ಮೂಲಕ ಇಂದು ಬೆಳಿಗ್ಗೆ 10:15 ರಿಂದ ನೇರ ಪ್ರಸಾರ ಮಾಡಲಾಗುತ್ತಿದೆ.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಕಳೆದ ವರ್ಷ ಜೂನ್ 5ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅದಾದ ಬಳಿಕ ಕೇವಲ ಒಂದು ವಾರದ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ ಬೋಯಿಂಗ್ ಸ್ಟಾರ್‌ಲೈನರ್‌ನಲ್ಲಿನ ಅಸಮರ್ಪಕ ಕಾರ್ಯದಿಂದಾಗಿ ಇಬ್ಬರೂ ಅಲ್ಲಿಯೇ ಸಿಲುಕಿಕೊಂಡರು. ಈಗ ಅವರನ್ನು ಮರಳಿ ತರಲು ಸ್ಪೇಸ್‌ಎಕ್ಸ್ ಡ್ರ್ಯಾಗನ್ ಅನ್ನು ಬಳಸಲಾಗುತ್ತಿದೆ. ಇಬ್ಬರು ಗಗನಯಾತ್ರಿಗಳು ಮಂಗಳವಾರ ಸಂಜೆ ಇತರ ಇಬ್ಬರು ಪ್ರಯಾಣಿಕರೊಂದಿಗೆ ಭೂಮಿಗೆ ಮರಳಲಿದ್ದಾರೆ.