ಜೀವನ‌ ಶೈಲಿ, ಹಸಿವು ಹಾಗೂ ಶಿಸ್ತು ವಿದ್ಯಾರ್ಥಿ ಜೀವನದಲ್ಲಿ ಮುಖ್ಯವಾದುದು: ಪ್ರೊ. ಬಿ.ಎಸ್. ನಾವಿ

ಹೊಸದಿಗಂತ ವರದಿ ಹುಬ್ಬಳ್ಳಿ:
ವಿದ್ಯಾರ್ಥಿಗಳಿಗೆ ಜೀವನ‌ ಶೈಲಿ, ಹಸಿವು ಹಾಗೂ ಶಿಸ್ತು ಬಹಳ ಮುಖ್ಯ. ಯಾರು ಈ ಮೂರು ಅಂಶಗಳನ್ನು ರೂಢಿಸಿಕೊಳ್ಳುತ್ತಾರೋ ಅವರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಿ.ಎಸ್. ನಾವಿ ಹೇಳಿದರು.

ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಭವನದಲ್ಲಿ ಬುಧವಾರ ಕಲಾ ಹಾಗೂ ವಾಣಿಜ್ಯ ಮಹಿಳಾ ಕಾಲೇಜಿನ ಮತ್ತು ಎಂಬಿಎ ಮಹಿಳಾ ಕಾಲೇಜಿನ 53 ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಯಶಸ್ಸು ಕಾಣಲು ಕಠಿಣ ಪರಿಶ್ರಮ, ಧೈರ್ಯ ಹಾಗೂ ಶ್ರದ್ಧೆ ಬಹಳ ಮುಖ್ಯವಾಗುತ್ತದೆ. ಜೀವನ ಶೈಲಿಯಲ್ಲಿ ಕಿಳರಿಮೆ, ಹೆಚ್ಚು ಕಡಿಮೆ ಅಂತ ಇರುವುದಿಲ್ಲ. ಎಲ್ಲ ಕಾರ್ಯದಲ್ಲಿ ಜೀವನ‌ ಶೈಲಿಯನ್ನು ನಾವು ತೊಡಗಿಸಿಕೊಂಡಾಗ ಗುರಿ ಮುಟ್ಟಲು ಸಾಧ್ಯ ಎಂದರು.

ನಮ್ಮಲ್ಲಿ ಯಾವಾಗಲೂ ಹೊಸದನ್ನು ಕಲಿಯುವ ಕುರಿತು ಹಸಿವಿರಬೇಕು. ಕೆಲಸ ಕಾರ್ಯ, ಸಾಧನೆಯಲ್ಲಿಯೂ ಸಹ ಹಸಿವಿರಬೇಕು. ಶಿಸ್ತು ರೂಢಿಸಿಕೊಂಡವರು ಜೀವನದಲ್ಲಿ ಏನಾದರೂ ಸಾಧಿಸಬಹುದು. ಮೌಲ್ಯಯುತ ಜೀವನ ನಡೆಸಲು ಈ ಮೂರು ಅಂಶಗಳು ಮುಖ್ಯವಾಗಿದೆ ಸ್ಪರ್ಧಾತ್ಮಕ ಯುಗದಲ್ಲಿ ಕಠಿಣ ಅಧ್ಯಯನ ಅವಶ್ಯಕ. ಕಾಲೇಜಿನಲ್ಲಿ ಮೌಲ್ಯಯುತ ಶಿಕ್ಷಣದ ಜೊತೆ ಭವಿಷ್ಯದಲ್ಲಿ ಬಲಿಷ್ಠ ಜೀವನ ರೂಢಿಸಿಕೊಳ್ಳು ವಿದ್ಯಾರ್ಥಿಗಳು ಇಚ್ಛಾಶಕ್ತಿ, ಆತ್ಮಶಕ್ತಿ ಹಾಗೂ ಜ್ಞಾನ ಶಕ್ತಿ ವಿಚಾರ ಶಕ್ತಿಗಳನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.

ಬೆಳಗಾವಿ ಲೋಕಾಯುಕ್ತ ವರಿಷ್ಠಾಧಿಕಾರಿ ಯಶೋಧ ಎಸ್ ವಂದಗೋಡಿ ಮಾತನಾಡಿ, ಕನ್ನಡ ದಲ್ಲಿ ಓದಿದವರು ಸಾಧನೆ ಮಾಡಲು ಆಗುದಿಲ್ಲ ಎಂದು ಬಹಳ ಜನರಲ್ಲಿ ತಪ್ಪು ಕಲ್ಪನೆ ಇರುತ್ತದೆ. ಆತ್ಮ ವಿಶ್ವಾಸವಿದ್ದರೆ ಏನು ಬೇಕಾದರೂ ಮಾಡಲು ಸಾಧ್ಯ. ಕಠಿಣ ಪರಿಶ್ರಮ ಮುಖ್ಯ ಎಂದರು.

ಜೀವನದಲ್ಲಿ ಕಲ್ಲು- ಮುಳ್ಳು, ಕಷ್ಟ-ಸುಖ ಅನುಭವಾಗಬೇಕು. ವಿದ್ಯಾರ್ಥಿನಿಗಳ ಮೇಲೆ ಪೋಷಕರು ನಂಬಿಕೆ‌ ಇಟ್ಟಿರುತ್ತಾರೆ. ಮೊಬೈಲ್ ಓದಲು, ಸಂವಹನ ಮಾಡಲು ಬಳಸಿಕೊಳ್ಳಿ. ಅದನ್ನು ಬಿಟ್ಟ ಅದೇ ಜೀವನವಾಗಬಾರದು. ಪಾಲಕರು ಸಹ ಬೇರೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ತುಲನೆ ಮಾಡಬಾರದು ಎಂದು ತಿಳಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!