ಜಸ್ಟ್‌ ಮಿಸ್‌! ಒಂದು ಕ್ಷಣ ತಡವಾಗಿದ್ರೂ ಬಾಲಕಿ ಪ್ರಾಣಕ್ಕೇ ಕುತ್ತು: ವಿಡಿಯೋ ವೈಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಣ್ಣ ಮಕ್ಕಳು ಆಟಕ್ಕೆ ಬಿದ್ದರೆ ಸುತ್ತಮುತ್ತ ಏನಾಗುತ್ತಿದೆ ಎಂಬುದರ ಬಗ್ಗೆಯೂ ಅರಿವಿರೋದಿಲ್ಲ. ಆದ್ದರಿಂದಲೇ ಪೋಷಕರು ಮಕ್ಕಳು ಆಟವಾಡುವಾಗ ಅವರ ಮೇಲೆ ನಿಗಾ ಇಡಬೇಕು. ಮುಖ್ಯವಾಗಿ ವಾಹನ ಸಂಚಾರ, ನೀರಿರುವ ಕಡೆ, ಓಟದಂತಹ ಸಮಯದಲ್ಲಿ, ಅವುಗಳನ್ನು ಎಚ್ಚರಿಕೆಯಿಂದಿರಬೇಕು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಗುವೊಂದ ಪ್ರಾಣ ಕ್ಷಣಾರ್ಧದಲ್ಲಿ ಬಚಾವ್‌ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವನ್ನು CCTV_IDIOTS ಪೋಸ್ಟ್ ಮಾಡಿದೆ. ಈ ವೀಡಿಯೊದಲ್ಲಿ ಮಗುವೊಂದು ನಡುರಸ್ತೆಯಲ್ಲಿ ಸೈಕಲ್ ಮೇಲೆ ವೇಗವಾಗಿ ಬರುತ್ತಿರುವುದನ್ನು ಕಂಡ ವ್ಯಕ್ತಿ ಕೂಡಲೇ ಬಾಲಕಿಯನ್ನು ಬಚಾವ್‌ ಮಾಡಿದ್ದಾನೆ. ಸೈಕಲ್ ಅತಿವೇಗದಲ್ಲಿ ಹೋಗಿ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲಿ ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!