LIFESTYLE| ನಿಮ್ಮ ಸಂಗಾತಿಯೊಂದಿಗೆ ನೀವು ಹೇಗಿದ್ದೀರಿ? ಅವರ ಖುಷಿಗಾಗಿ ಇಷ್ಟೂ ಮಾಡದಿದ್ರೆ ಹೇಗೆ? 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮದುವೆ ಜೀವನದಲ್ಲಿ ಒಮ್ಮೆ ಆಗುವ ಅದ್ಬುತ ಕ್ಷಣ..ಯಾರು ಯಾರ ಬದುಕಿನಲ್ಲಿ ಹೇಗೆ, ಯಾಕೆ ಬರುತ್ತಾರೆ ಎಂದು ಹೇಳಲು ಆಗುವುದಿಲ್ಲ. ಜೀವನ ಸಂಗಾತಿಯಾಗಿ ಬಂದವರನ್ನು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯೂ ಹೌದು.

ಮದುವೆ ಬಳಿಕ ಕೆಲ ಬಂಧಗ ಗಟ್ಟಿಯಾಗಿ ನಿಲ್ಲುತ್ತವೆ, ಕೆಲವು ತಪ್ಪು ತಿಳುವಳಿಕೆಯಿಂದ ಬೇಗ ಮುರಿದು ಬೀಳುತ್ತವೆ. ಬಂಧ ಗಟ್ಟಿಯಾಗಿರಬೇಕೆಂದರೆ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಯತ್ನಿಸಬೇಕು. ಪ್ರೀತಿಯನ್ನು ವ್ಯಕ್ತಪಡಿಸಲು ಪದಗಳ ರೂಪ ಆಗಬಹುದು..ಕೆಲವು ಕೆಲಸದ ರೂಪದಲ್ಲಿಯೂ ಆಗಬಹುದು. ನಿಮ್ಮ ಸಂಗಾತಿಯ ಸಂತೋಷವನ್ನು ಇಮ್ಮಡಿಗೊಳಿಸಲು ಇಷ್ಟಾದರೂ ಮಾಡಬೇಕಾಗುತ್ತದೆ.

  • ಹಾಟ್ ಬಲೂನ್ ರೈಡ್ ಒಂದು ಸೂಪರ್ ಮೋಜಿನ ಚಟುವಟಿಕೆ. ನಿಮ್ಮ ಸಂಗಾತಿಯೊಂದಿಗೆ ನೆಲದಿಂದ ಸಾವಿರಾರು ಕಿಲೋಮೀಟರ್‌ಗಳಷ್ಟು ಎತ್ತರದಲ್ಲಿ ಇರುವುದು ಜೀವಿತಾವಧಿಯಲ್ಲಿ ಒಮ್ಮೆ ನೀವು ಎಂದೆಂದಿಗೂ ನೆನಪಿನಲ್ಲಿ ಉಳಿಯುವ ಅನುಭವ ಹೌದು. ಈ ಸಂದರ್ಭದಲ್ಲಿ ಮನದ ಭಾವನೆಗಳನ್ನು ಹೇಳಿಕೊಳ್ಳಲು ಒಂದು ಅವಕಾಶ.
  • ಒಂದು ಕಾಗದದ ಮೇಲೆ ನಿಮ್ಮ ಆಲೋಚನೆ, ಪ್ರೀತಿಯ ಭಾವನೆಯನ್ನು ಕಾಗದದ ಮೇಲೆ ಬರೆಯಲು ಪ್ರಯತ್ನಿಸಿ.
  • ಅಯ್ಯೋ ನಾನು ಕವಿಯಲ್ಲ, ನನಗೆ ಬರೆಯೋಕೆ ಬರಲ್ಲ ಅಂತಾದರೆ ನಿಮ್ಮ ಸಂಗಾತಿಯ ಬಗ್ಗೆ ನಿಮಗೆ ಇಷ್ಟವಾದ ವಿಷಯಗಳ ಬಗ್ಗೆ ಬರೆದರಷ್ಟೇ ಸಾಕು.
  • ನಿಮ್ಮ ಸಂಗಾತಿಯೊಂದಿಗೆ ನೀವು ಇನ್ನೂ ರೋಡ್ ಟ್ರಿಪ್ ಮಾಡಿಲ್ಲದಿದ್ದರೆ, ಈಗಲೇ ಹೋಗಿ. ಜೀವನದಲ್ಲಿ ಕೆಲವು ಉತ್ತಮ ಕ್ಷಣಗಳನ್ನು ಕಳೆದುಕೊಂಡಿದ್ದೀರಿ. ಈ ಪ್ರಯಾಣಗಳು ತುಂಬಾ ಖುಷಿ ಕೊಡುತ್ತವೆ.
  • ಸಂಗಾತಿಯೊಂದಿಗೆ ಪ್ರಯಾಣಿಸುವಾಗ ಅನಿರೀಕ್ಷಿತ ವಿಷಯಗಳನ್ನು ಅನುಭವಿಸುವ ಸಂತೋಷಕ್ಕೆ ಸಾಟಿಯಿಲ್ಲ.
  • ಜೊತೆ ಜೊತೆಯಾಗಿ ಗಿಡಗಳನ್ನು ನೆಡಿ..ಇವು ಬಹಳಷ್ಟು ನೆನಪುಗಳೊಂದಿಗೆ ಬೇರೂರುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!