ಭಾರತ-ಪಾಕ್ ಪಂದ್ಯದಲ್ಲಿ ‘ಲೈಗರ್’ ಸದ್ದು: ಪ್ರೇಕ್ಷಕರೊಂದಿಗೆ ಪಂದ್ಯ ವೀಕ್ಷಿಸಿದ ವಿಜಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗಷ್ಟೇ ‘ಲೈಗರ್’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ಯುವ ನಾಯಕ ವಿಜಯ್ ದೇವರಕೊಂಡ ದುಬೈನಲ್ಲಿ ಭಾರತ-ಪಾಕ್ ಪಂದ್ಯವನ್ನು ನೇರವಾಗಿ ವೀಕ್ಷಿಸಿದರು. ಏಷ್ಯಾಕಪ್ ಅಂಗವಾಗಿ ಭಾನುವಾರ ಸಂಜೆ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯುತ್ತಿತ್ತು. ಈ ಪಂದ್ಯವನ್ನು ನೇರವಾಗಿ ವೀಕ್ಷಿಸಲು ವಿಜಯ್‌ ದೇವರಕೊಂಡ ದುಬೈ ತಲುಪಿದ್ದರು. ಕ್ರೀಡಾಂಗಣದಲ್ಲಿ ಮಾಜಿ ಕ್ರಿಕೆಟಿಗ ಜತಿನ್ ಸಪ್ರು, ಇರ್ಫಾನ್ ಪಠಾಣ್ ಅವರೊಂದಿಗೆ ಮಾತನಾಡಿದರು. ಬಳಿಕ ಅಲ್ಲಿದ್ದ ಪ್ರೇಕ್ಷಕರೊಂದಿಗೆ ಪಂದ್ಯ ವೀಕ್ಷಿಸಿದರು. “ಪಂದ್ಯ ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧ ಶತಕ ಬಾರಿಸುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಪಂದ್ಯ ನೋಡುವುದಲ್ಲದೆ, ಲೈಗರ್ ಪ್ರಚಾರಕ್ಕಾಗಿಯೂ ಇಲ್ಲಿಗೆ ಬರಲು ಬಯಸಿದ್ದರು ಎಂದಿದ್ದಾರೆ. ಸಿನಿಮಾದ ನೆಗೆಟಿವ್ ಟಾಕ್ ನಡುವೆಯೂ ವಿಜಯ್ ದುಬೈಗೆ ತೆರಳಿ ಪ್ರೇಕ್ಷಕರೊಂದಿಗೆ ಉತ್ಸಾಹದಿಂದ ಪಂದ್ಯ ವೀಕ್ಷಿಸಿದರು. ಇತ್ತೀಚೆಗಷ್ಟೇ ಪ್ಯಾನ್ ಇಂಡಿಯಾ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬಂದಿದ್ದ ‘ಲೈಗರ್’ ನೆಗೆಟಿವ್ ಟಾಕ್ ನಲ್ಲಿ ಓಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!