ಬೆಳಕು.. ಆದರೆ ಇದು ಬೆಳಕಲ್ಲ 100 ದಿನದ ದರ್ಶನ: ಕಾಂತರಾದ ಸಕ್ಸಸ್ ಸಂಭ್ರಮದಲ್ಲಿ ರಿಷಬ್ ಶೆಟ್ಟಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲಿ ಹೊಸ ಛಾಪನ್ನು ಮೂಡಿಸಿರುವ ಕಾಂತಾರ ಸಿನಿಮಾ. ಈಗಲೂ ತನ್ನ ಕ್ರೆಜ್ ಮುಂದುವರಿಸಿದ್ದು, ಅಭಿಮಾನಿಗಳು ಪ್ರೀತಿಯಿಂದ ಸಿನಿಮಾ ನೋಡುತ್ತಿದ್ದಾರೆ .

ಸದ್ಯ`ಕಾಂತಾರ’ ಸಿನಿಮಾ ಶತದಿನೋತ್ಸವ ಆಚರಿಸಿದೆ. ಈ ಸಕ್ಸಸ್‌ಫುಲ್ ಜರ್ನಿಯ ಬಗ್ಗೆ ರಿಷಬ್ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸೆಪ್ಟೆಂಬರ್ 30ರಂದು `ಕಾಂತಾರ’ ಸಿನಿಮಾ ತೆರೆಕಂಡಿತ್ತು. 2022ರ ವರ್ಷದ ಬ್ಲ್ಯಾಕ್ ಬಸ್ಟರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ರಿಲೀಸ್ ಆಗಿ ಸಿನಿಮಾ ಸಕ್ಸಸ್ ಕಂಡಿದೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. 100 ದಿನಗಳನ್ನ ಪೂರೈಸಿರುವ ಬಗ್ಗೆ ರಿಷಬ್ ಶೆಟ್ಟಿ ಸ್ಪೆಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

ʻಬೆಳಕು.. ಆದರೆ ಇದು ಬೆಳಕಲ್ಲ 100 ದಿನದ ದರ್ಶನʼ ಎಂದು ರಿಷಬ್ ಶೆಟ್ಟಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಪ್ರಯಾಣದ ಉದ್ದಕ್ಕೂ ನಮ್ಮನ್ನು ಹಿಡಿದಿಟ್ಟುಕೊಂಡು ದೈವತ್ವವನ್ನು ಕಂಡುಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!