ಕೇವಲ ಹಲ್ಲಿನ ಸಹಾಯದಿಂದ ಎಳೆದನು ಈತ ಬರೋಬ್ಬರಿ 15,730 ಕೆಜಿಯ ಟ್ರಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ನಾವು ವಿವಿಧ ರೀತಿಯ ಸಾಹಸ ಪ್ರದರ್ಶನಗಳನ್ನು ಕಾಣುತ್ತೇವೆ. ಅದ್ರಲ್ಲಿ ಅದೆಷ್ಟು ದಾಖಲೆಗಳನ್ನು ಕೂಡ ಬರೆದುಕೊಂಡಿವೆ. ಅದೇ ರೀತಿ ಇಲ್ಲಿ ವ್ಯಕ್ತಿಯೊಬ್ಬ ತನ್ನ ಹಲ್ಲುಗಳ ಸಹಾಯದಿಂದ ಬರೋಬ್ಬರಿ 15,730 ಕೆಜಿ ಭಾರವುಳ್ಳ ಟ್ರಕ್ ಎಳೆದು ಗಿನ್ನೆಸ್ ದಾಖಲೆ ಮಾಡಿದ್ದಾನೆ.

ಹೌದು, ಇದು ನಡೆದಿದ್ದು, ಈಜಿಪ್ಟ್‌ನ ನಲ್ಲಿ. ಇಲ್ಲಿನ ಅಶ್ರಫ್ ಸುಲಿಮಾನ್ ಎಂಬ ವ್ಯಕ್ತಿ ಟ್ರಕ್‌ನ್ನು ತನ್ನ ಹಲ್ಲುಗಳ ಸಹಾಯದಿಂದ ಎಳೆಯುತ್ತಿರುವ ವೀಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯೇ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದೆ. ಈ ಟ್ರಕ್ 15,730 ಕೆಜಿ ಭಾರ ಹೊಂದಿದೆ.

ಈಜಿಪ್ಟ್‌ನ ಹೆದ್ದಾರಿಗಳ ಮೇಲೆ ಈ ವ್ಯಕ್ತಿ ಟ್ರಕ್‌ನ್ನು ಹಲ್ಲುಗಳಲ್ಲೇ ಎಳೆದಿದ್ದಾನೆ.

2021ರ ಜೂನ್ 13ರಂದು ಈ ದಾಖಲೆ ಮಾಡಿದ್ದಾನೆ. ಎರಡು ದಿನಗಳ ಹಿಂದೆ ಈ ವೀಡಿಯೋವನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ವೀಡಿಯೋ ವೀಕ್ಷಣೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!