October 14, 2026
Wednesday, October 14, 2026
spot_img

ಬಸವನಬಾಗೇವಾಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲಘು ಭೂಕಂಪ: ಜೋರಾಗಿ ಬೊಗಳಿದ ನಾಯಿ

ಹೊಸದಿಗಂತ ವರದಿ ಬಸವನಬಾಗೇವಾಡಿ:

ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಗುರುವಾರ ನಸುಕಿನ ಜಾವ 5ಗಂಟೆ 34ನಿಮಿಷ 35ಸೆಂಕೆಂಡದಲ್ಲಿ ಭೂಮಿ ನಡುಗಿದ ಅನುಭವ ಆಗಿದ್ದು ಪಟ್ಟಣದ ಓಂ ನಗರದ ಕಾಳಿಕಾದೇವಿ ದೇವಸ್ಥಾನದ ಹತ್ತಿರ ಬೆಳ್ಳಗಿನ ಜಾವ 5-35ರ ಹೊತ್ತಿ 2ಬಾರಿ ಭೂಮಿ ಕಂಪನವಾಗಿದೆ.

ಈ ವೇಳೆ ನಾಯಿ ಭೂಗಳಿತು, ಬಾತ್ ರೋಮ್ ಗೆ ಹೋದವರು ಕೂಡಾ ಅನುಭವ ಹಂಚಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ನೇಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ(ಕೆ.ಎಸ್. ಎನ್.ಡಿ.ಎಂ.ಸಿ) ವರದಿ ಪ್ರಕಾರ ರಿಕ್ಟರ್ ಮಾಪಕದಲ್ಲಿ 3.6 ತೀವ್ರತೆ ದಾಖಲಾಗಿದೆ.

ಇದರ ಕೇಂದ್ರ ಬಿಂದು ತಾಲೂಕಿನ ಇಂಗಳೇಶ್ವರ ಗ್ರಾಮ ಪಂಚಾಯತಿಯಿಂದ ಅಗ್ನೆಯಕ್ಕೆ 2.4ಕಿ.ಮೀ ದೂರದಲ್ಲಿ ಹಾಗೂ ಭೂಮಿಯ ಒಳಗಡೆ 10ಕಿ. ಮೀ ಆಳದಲ್ಲಿ ಇತ್ತು ಎಂದು x ಖಾತೆಯಿಂದ ತಿಳಿದು ಬಂದಿದ್ದು ಭೂಕಂಪ ತೀವ್ರತೆ ಕಡಿಮೆ ಇದ್ದ ಪರಿಣಾಮ ಯಾವುದೇ ಪ್ರಾಣ ಹಾನಿಯಾಗಿಲ್ಲ ಇದ್ದರಿಂದ ಯಾರು ಭಯಪಡುವುದು ಬೇಡ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read