ಮೇಲಿಂದ ಬಿದ್ದು ಲೈಟ್‌ಮ್ಯಾನ್‌ ಸಾವು, ಯೋಗರಾಜ್‌ ಭಟ್‌ ವಿರುದ್ಧ ಎಫ್‌ಐಆರ್‌ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

‘ಮನದ ಕಡಲು’ ಸಿನಿಮಾ ಚಿತ್ರೀಕರಣದ ವೇಳೆ 30 ಅಡಿ ಎತ್ತರದಿಂದ ಬಿದ್ದು ಲೈಟ್ ಮ್ಯಾನ್ ಸಾವನ್ನಪ್ಪಿರೋ ಘಟನೆ ನೆಲಮಂಗಲದ ಅಡಕಮಾರನಹಳ್ಳಿ ಬಳಿ ನಡೆದಿದೆ. ಮೋಹನ್ ಕುಮಾರ್ ಮೃತ ದುರ್ದೈವಿ.

ಮೋಹನ್ ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್, ಮ್ಯಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್, ಅಡಕಮಾರನಹಳ್ಳಿಯ ಕೃಷ್ಣಪ್ಪ ವಿರುದ್ದ ಎಫ್ಐಆರ್ ದಾಖಲಾಗಿದೆ.

30 ಅಡಿ ಎತ್ತರದ ಅಲ್ಯೂಮಿನಿಯಂ ರೋಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದ. ಇದೇ ವೇಳೆ ಲೈಟ್ ಮ್ಯಾನ್ ಏಕಾಏಕಿ ಕೆಳಗಡೆ ಬಿದ್ದಿದ್ದಾನೆ. ಪರಿಣಾಮ ಮೋಹನ್ ಕುಮಾರ್ ತಲೆಗೆ ಗಂಭೀರ ಪೆಟ್ಟಾಗಿದೆ. ಆ ಕೂಡಲೇ ಆತನನ್ನು ಗೋರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಲೈಟ್ ಮ್ಯಾನ್ ಮೃತಪಟ್ಟಿದ್ದಾರೆ. ಹೀಗಾಗಿ ಲೈಟ್ ಮ್ಯಾನ್ ಸಹೋದರ ಶಿವರಾಜ್ ದೂರಿನನ್ವಯ ಮಾದನಾಯಕನಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!