ಬಾಗಲಕೋಟೆಯಲ್ಲಿ ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ: ಮೂವರ ದುರ್ಮರಣ

ಹೊಸದಿಗಂತ ವರದಿ ಬಾಗಲಕೋಟೆ:

ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ ದುರ್ಘಟನೆ ತಡರಾತ್ರಿ ನವನಗರದಲ್ಲಿ ನಡೆದಿದೆ.

ನವನಗರದ ಅಬಕಾರಿ ಇಲಾಖೆ ಸಮೀಪದಲ್ಲಿ ನಡೆದಿರುವ ಅಪಘಾತದಲ್ಲಿ ವೈದ್ಯೆ ಕೃತಿಕಾ ಒಂಟಕುದರಿ (32), ಸ್ನೇಹಿತೆ ರಜನಿ ಒಂಟಕುದರಿ (34), ಅಭಿಷೇಕ ಬಂಡಿವಡ್ಡರ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಖಾಸಗಿ ಆಸ್ಪತ್ರೆಯಲ್ಲಿ ದಂತ ವೈದ್ಯ ಆಗಿದ್ದ ಕೃತಿಕಾ,ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ರಜನಿ ಸಾವನ್ನಪ್ಪಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!