ಕೊಹ್ಲಿಗೆ ಬೆಂಗಳೂರೇ ತವರಂತೆ, ಸಿಲಿಕಾನ್ ಸಿಟಿಯನ್ನು ಇಷ್ಟು ಇಷ್ಟಪಡೋದ್ಯಾಕೆ ವಿರಾಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿಗೆ ಬೆಂಗಳೂರು ಅಂದ್ರೆ ತುಂಬಾನೇ ಇಷ್ಟ. ಕೊಹ್ಲಿಗೂ ಬೆಂಗಳೂರಿಗೂ ಅವಿನಾಭವ ಸಂಬಂಧ ಇದೆ. ಐಪಿಎಲ್‌ನಲ್ಲಿಯೂ ಕೊಹ್ಲಿ ಬೆಂಗಳೂರನ್ನೇ ಅಷ್ಟೊಂದು ಮೆಚ್ಚಿಕೊಂಡಿದ್ದು ಯಾಕೆ?

ಈ ಬಗ್ಗೆ ಸಂದರ್ಶನವೊಂದರಲ್ಲಿ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಬೆಂಗಳೂರಿಗೂ ಕೊಹ್ಲಿಗೂ ಹಳೆಯ ಸಂಬಂಧ ಒಂದಿದೆ. ವಿರಾಟ್ ಕೊಹ್ಲಿಯ ಜ್ಯೂನಿಯರ್ ಕ್ರಿಕೆಟ್ ಶುರುವಾಗಿದ್ದು ಬೆಂಗಳೂರಿನಲ್ಲಿ. ಅಂಡರ್-14, ಅಂಡರ್-15 ಕ್ಯಾಂಪ್‌ಗಾಗಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಗೆ ಕೊಹ್ಲಿ ಬರುತ್ತಿದ್ದರು. ಎರಡು ಮೂರು ತಿಂಗಳು ಬೆಂಗಳೂರಿನಲ್ಲೇ ಇದ್ದರು.

ಇನ್ನು ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡಲ್ಲಿ ಕೊಹ್ಲಿ ಇದ್ದಾಗಿನಿಂದಲೂ ಬೆಂಗಳೂರಿನ ಜನ ಸಿಕ್ಕಾಪಟ್ಟೆ ಸಪೋರ್ಟ್ ಮಾಡಿದ್ದಾರೆ. ಕೊಹ್ಲಿ ಕ್ಯಾಪ್ಟನ್ಸಿಯಲ್ಲಿ ಗೆಲುವು ಕಂಡಾಗ ಜನ ಉಬ್ಬಿದ್ದಾರೆ. ಸೋತಾಗಲೂ ನಮ್ಮ ಆರ್‌ಸಿಬಿ ಎಂದು ತಂಡವನ್ನು ಒಪ್ಪಿದ್ದಾರೆ. ಸೋಲು ಗೆಲುವಲ್ಲೂ ಜೊತೆಗೇ ಇದ್ದಿದ್ದು ಬೆಂಗಳೂರು ಫ್ಯಾನ್ಸ್ ಎಂದು ವಿರಾಟ್ ಹೇಳಿದ್ದಾರೆ.

ಇನ್ನು ಅನುಷ್ಕಾ ಕೂಡ ಬೆಂಗಳೂರಿನಲ್ಲೇ ಬೆಳೆದಿದ್ದಾರೆ. ಅನುಷ್ಕಾ ಬೆಂಗಳೂರಿನಲ್ಲಿ ತಮ್ಮ ಡಿಗ್ರಿ ಮುಗಿಸಿದ್ದಾರೆ. ಬೆಂಗಳೂರಿಗೆ ಬಂದ ತಕ್ಷಣ ತವರು ಮನೆ ಅನುಭವ ಆಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!