ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸದ್ದಿಲ್ಲದೇ ಡೇರ್ಡೆವಿಲ್ ಮುಸ್ತಫಾ ಸಿನಿಮಾ ತೆರೆಕಂಡಿದ್ದು, ಭರ್ಜರಿ ಓಪನಿಂಗ್ ಕಂಡಿದೆ.
ಸಿನಿಮಾ ನೋಡಿದವರೆಲ್ಲ ಮಿಸ್ ಮಾಡದೇ ನೋಡಿ ಎಂದಷ್ಟೇ ಹೇಳುತ್ತಿದ್ದಾರೆ. ರೆಟ್ರೋ ಕಾಲದ ಕಥೆ ಇದಾಗಿದ್ದು, ನಿರ್ದೇಶಕ ಶಶಾಂಕ್ ಸೋಗಾಲ್ ಕಥೆಯನ್ನು ಕಟ್ಟಿಕೊಟ್ಟ ರೀತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎರಡು ಗಂಟೆ 40 ನಿಮಿಷದ ಸಿನಿಮಾ ಇದಾಗಿದ್ದರೂ ಎಲ್ಲಿಯೂ ಬೋರ್ ಹೊಡೆಸದ ನಗಿಸುವ ಫ್ಯಾಮಿಲಿ ಎಂಟರ್ಟೇನರ್ ಇದಾಗಿದೆ. ಶಿಶಿರ್ ಬೈಕಾಡಿ, ಆದಿತ್ಯ ಆಶ್ರೀ, ಸುಪ್ರೀತ್ ಭಾರದ್ವಾಜ್, ಅಭಯ್, ಮಂಡ್ಯ ರಮೇಶ್, ಆಶಿಸ್ ಶ್ರೀವತ್ಸಾ ಹೀಗೆ ಹೊಸಮುಖಗಳನ್ನು ಪರಿಚಯಿಸಿದ್ದು ಎಲ್ಲರೂ ಅಚ್ಚುಕಟ್ಟಾಗಿ ಅಭಿನಯ ಮಾಡಿದ್ದಾರೆ.