ಗಡಿ ಕುರಿತ ಮಹಾ ವಿಧಾನಸಭೆ ನಿರ್ಣಯಕ್ಕೆ ಕಾನೂನಾತ್ಮಕವಾಗಿ ಯಾವ ಮಹತ್ವವೂ ಇಲ್ಲ: ಡಾ.ಕೆ.ಸುಧಾಕರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆಳಗಾವಿ, ಕಾರವಾರ, ನಿಪಾಣಿ, ಬೀದರ್ ಮತ್ತು ಭಾಲ್ಕಿ ವ್ಯಾಪ್ತಿಯ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಕುರಿತು ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಮತ್ತು ಕಾನೂನುಬದ್ಧವಾಗಿ ಆ ನಿರ್ಣಯಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಕಾನೂನನ್ನು ಗೌರವಿಸುವ ಯಾವುದೇ ರಾಜಕಾರಣಿ ಸುಪ್ರೀಂ ಕೋರ್ಟ್‌ನ ಆದೇಶಕ್ಕಾಗಿ ಕಾಯಬೇಕಾಗುತ್ತದೆ. ರಾಜ್ಯ ಮರುಸಂಘಟನೆಗೆ ಸಂಬಂಧಿಸಿದಂತೆ ಮಹಾಜನ್ ಆಯೋಗದ ವರದಿ ಮತ್ತು ನಿರ್ಧಾರಗಳನ್ನು ನಾವು ಹೊಂದಿದ್ದೇವೆ ಮತ್ತು ಇದು ಇತ್ಯರ್ಥವಾದ ವಿಷಯವಾಗಿದೆ. ನಾವು ಬದ್ಧತೆ ಮತ್ತು ಒಗ್ಗಟ್ಟಿನಿಂದ ಹೋರಾಡುತ್ತಿದ್ದೇವೆ. ಮಹಾರಾಷ್ಟ್ರ ಸೇರಿದಂತೆ ಯಾವುದೇ ರಾಜ್ಯಕ್ಕೆ ಕರ್ನಾಟಕದ ಒಂದು ಇಂಚು ಭೂಮಿಯನ್ನು ನೀಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈ ವಿಚಾರ ಸ್ಪಷ್ಟಪಡಿಸಿದ್ದಾರೆ,’’ ಎಂದರು.
ರಾಜಕೀಯ ಪ್ರೇರಿತ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ, ಕರ್ನಾಟಕದ ಜನರು ಮಹಾರಾಷ್ಟ್ರದ ಜನರು ತಮ್ಮ ಸಹೋದರರು ಎಂದು ಭಾವಿಸುತ್ತಾರೆ. ಮಹಾರಾಷ್ಟ್ರದ ನಾಯಕರು ಸಹ ಅದೇ ಭಾವನೆ ವ್ಯಕ್ತಪಡಿಸಬೇಕು. ಇಂತಹ ರಾಜಕೀಯ ಹೇಳಿಕೆಗಳು ಅಥವಾ ಘೋಷಣೆಗಳು ಎರಡೂ ಜನರ ಸೌಹಾರ್ದ ಸಂಬಂಧ ಮತ್ತು ಸ್ನೇಹವನ್ನು ಹಾಳುಮಾಡುವ ಸಾಮರ್ಥ್ಯ ಹೊಂದಿದೆ” ಎಂದು ಡಾ.ಸುಧಾಕರ್ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!