October 8, 2026
Thursday, October 8, 2026
spot_img

ಲಿಯೋನೆಲ್ ಮೆಸ್ಸಿ ಕೊನೆಯ ವಿಶ್ವಕಪ್ ಫೈನಲ್? ನ್ಯೂಜೆರ್ಸಿ ಮಹಾಸಮರಕ್ಕೆ ಕೌಂಟ್‌ಡೌನ್ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫಿಫಾ ವಿಶ್ವಕಪ್ 2026ರ ಮಹಾ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜಗತ್ತಿನ ಕಣ್ಣುಗಳು ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮೇಲಿವೆ. ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ಈ ಹೈವೋಲ್ಟೇಜ್ ಪಂದ್ಯವು, 39 ವರ್ಷದ ಮೆಸ್ಸಿ ಅವರ ವೃತ್ತಿಜೀವನದ ಕಟ್ಟಕಡೆಯ ವಿಶ್ವಕಪ್ ಪಂದ್ಯವಾಗುವ ಎಲ್ಲಾ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ವಯಸ್ಸಿನ ಸವಾಲು ಮತ್ತು ನಿವೃತ್ತಿ ಚರ್ಚೆ

ಮುಂದಿನ ಜಾಗತಿಕ ಫುಟ್‌ಬಾಲ್ ಟೂರ್ನಿ ವೇಳೆಗೆ ಮೆಸ್ಸಿಗೆ 43 ವರ್ಷ ತುಂಬುವುದರಿಂದ, ಅವರು ಮತ್ತೊಂದು ವಿಶ್ವಕಪ್ ಆಡುವುದು ಕಷ್ಟಸಾಧ್ಯ. ಹೀಗಾಗಿ, ಭಾನುವಾರದ ಫೈನಲ್ ಪಂದ್ಯದ ಬಳಿಕ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ. ಆದರೆ ಈ ಕುರಿತು ಮೆಸ್ಸಿ ಕಡೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.

ದಾಖಲೆಗಳ ಸುರಿಮಳೆಗೆ ಸಜ್ಜಾದ ಫುಟ್‌ಬಾಲ್ ತಾರೆ

ಪ್ರಸ್ತುತ ಚಾಲ್ತಿಯಲ್ಲಿರುವ 2026ರ ವಿಶ್ವಕಪ್‌ನಲ್ಲಿ ಮೆಸ್ಸಿ ಅದ್ಭುತ ಫಾರ್ಮ್‌ನಲ್ಲಿದ್ದು, ಈಗಾಗಲೇ 8 ಗೋಲು ಹಾಗೂ 4 ಅಸಿಸ್ಟ್‌ಗಳ ಮೂಲಕ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಭಾನುವಾರ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಕಪ್ ಗೆಲ್ಲುವುದರ ಜೊತೆಗೆ, ಹಲವು ಐತಿಹಾಸಿಕ ಜಾಗತಿಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲು ಮೆಸ್ಸಿ ಸಂಪೂರ್ಣ ಸಜ್ಜಾಗಿದ್ದಾರೆ.

Must Read