‘IPL’ ಹರಾಜಿಗೆ 405 ಕ್ರಿಕೆಟಿಗರ ಪಟ್ಟಿ ಬಿಡುಗಡೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2023 ಆರಂಭಿಸಲು ಭರದ ಸಿದ್ಧತೆ ನಡೆಯುತ್ತಿದ್ದು, ಇದರ ಭಾಗವಾಗಿ ಹರಾಜಿಗಾಗಿ ಪಟ್ಟಿಯು ಸಿದ್ದಗೊಂಡಿದೆ.

ಕೊಚ್ಚಿಯಲ್ಲಿ ಡಿಸೆಂಬರ್ 23ರಂದು ಹರಾಜು ನಡೆಯಲಿದ್ದು, ಒಟ್ಟು 405 ಕ್ರಿಕೆಟಿಗರ ಪಟ್ಟಿ ಸಿದ್ದಗೊಂಡಿದೆ.
ಈಗಾಗಲೇ 10 ಫ್ರಾಂಚೈಸಿಗಳು 991 ಆಟಗಾರರ ಪಟ್ಟಿಯಿಂದ 369 ಆಟಗಾರರ ಶಾರ್ಟ್ಲಿಸ್ಟ್ ಸಿದ್ದಪಡಿಸಿದ್ದು, ಇದೀಗ ಈ ಪಟ್ಟಿಗೆ 36 ಆಟಗಾರರನ್ನು ಸೇರಿಸಲಾಗಿದ್ದು, ಈ ಮೂಲಕ ಒಟ್ಟು ಆಟಗಾರರ ಸಂಖ್ಯೆ 405ಕ್ಕೆ ಏರಿಕೆಯಾಗಿದೆ.

ಇನ್ನು 405 ಆಟಗಾರರಲ್ಲಿ 273 ಮಂದಿ ಭಾರತೀಯರು, 132 ಮಂದಿ ವಿದೇಶಿ ಆಟಗಾರರು ಮತ್ತು ನಾಲ್ವರು ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಸೇರಿದ್ದಾರೆ.

ಈ ಬಾರಿ ಪಟ್ಟಿಯಲ್ಲಿರುವ 132 ವಿದೇಶಿ ಆಟಗಾರರಲ್ಲಿ 27 ಮಂದಿ ಇಂಗ್ಲೆಂಡ್ ಮೂಲದವರಾಗಿದ್ದು, 21 ಆಟಗಾರರು ಆಸ್ಟ್ರೇಲಿಯಾದವರಾಗಿದ್ದಾರೆ . 22 ಮಂದಿ ದಕ್ಷಿಣ ಆಫ್ರಿಕಾ, 20 ಮಂದಿ ವೆಸ್ಟ್ ಇಂಡೀಸ್, 10 ಮಂದಿ ನ್ಯೂಜಿಲೆಂಡ್ ಮತ್ತು 8 ಮಂದಿ ಅಫ್ಘಾನಿಸ್ತಾನದಿಂದ ಸೇರಿಕೊಂಡಿದ್ದಾರೆ.

87 ಆಟಗಾರರು ಮಾತ್ರ ಐಪಿಎಲ್ 2023ರಲ್ಲಿ ಭಾಗವಹಿಸುವ ಅವಕಾಶವನ್ನ ಪಡೆಯುತ್ತಾರೆ, 30 ಆಟಗಾರರನ್ನ ವಿದೇಶಿ ಆಟಗಾರರಿಗೆ ಸ್ಲಾಟ್ ಮಾಡಲಾಗಿದೆ.

ಈ ಬಾರಿ 2 ಕೋಟಿ ರೂ.ಗಳು ಅತ್ಯಧಿಕ ಮೀಸಲು ಬೆಲೆಯಾಗಿದ್ದು, 19 ವಿದೇಶಿ ಆಟಗಾರರು ಅತ್ಯುನ್ನತ ಬ್ರಾಕೆಟ್ ನಲ್ಲಿ ಸ್ಥಾನ ಪಡೆಯಲು ಆಯ್ಕೆ ಮಾಡಿದ್ದಾರೆ. 11 ಆಟಗಾರರು ಹರಾಜಿನ ಪಟ್ಟಿಯಲ್ಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!