Thursday, March 23, 2023

Latest Posts

ಈ ತಿಂಗಳ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ? ಸಿದ್ದರಾಮಯ್ಯ ಹೇಳಿದ್ದೇನು?

ದಿಗಂತ ವರದಿ ವಿಜಯಪುರ:

ಈ ತಿಂಗಳ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಹೊಸಬರಿಗೆ, ಹಳಬರಿಗೆ ಟಿಕೆಟ್ ಕೊಡಲಾಗುತ್ತದೆ. ಬರಿ ಹೊಸಬರಿಗೆ ಟಿಕೆಟ್ ಕೊಡಲ್ಲ. ಗೆಲ್ಲುವವರಿಗೆ ಟಿಕೆಟ್ ಕೊಡಲಾಗುತ್ತದೆ ಎಂದರು.

ಅಲ್ಲದೇ, ಮೂರು ಬಾರಿ ಸರ್ವೇ ಮಾಡಸಲಾಗಿದೆ. ಯಾರು ಗೆಲ್ಲುತ್ತಾರೆ, ಗೆಲ್ಲುವ ಸಾಧ್ಯತೆ ಇದೆ ಅದನ್ನ ನೋಡಿಕೊಂಡಿ ಟಿಕೆಟ್ ಕೊಡಲಾಗುತ್ತದೆ. ಸಾಮಾಜಿಕ ನ್ಯಾಯಕ್ಕೆ ಯಾವುದೇ ಲೋಪವಾಗಲ್ಲ. ಅಲ್ಪಸಂಖ್ಯಾತರಿಗೆ ಕೊಡಬೇಕು ಅನ್ನೋದೇನಿದೆ, ಅಲ್ಲಿ ಅಲ್ಪಸಂಖ್ಯಾತರು ಗೆಲ್ಲುತ್ತಾರೆ ಅನ್ನೋ ಕಡೆ ಕೊಡಲಾಗುತ್ತದೆ ಎಂದರು.

ಹಿಂದುಳಿದವರು ಗೆಲ್ಲುವ ಕಡೆಗೆ ಅವರಿಗೆ ಕೊಡಲಾಗುತ್ತದೆ. ಎಸ್ಸಿ, ಎಸ್ಟಿ 51 ಸೀಟ್ ಇವೆ. ಗೆಲ್ಲೋರಿಗೆ ಕೊಡ್ತೀವಿ. ಯುವಕರಿಗೆ ಆದ್ಯತೆ ನೀಡಿದ್ದೇವಿ. ಅದೇ ತರಹ ವಯಸ್ಸಾದವರನ್ನ ಬಿಡ್ತೀವಿ ಅಂತಾ ಅಲ್ಲ. ಗೆಲುವಿಗೆ ನಮ್ಮ ಆದ್ಯತೆ ನೀಡಿ ರಾಜ್ಯದಲ್ಲಿ ಕನಿಷ್ಠ 130 ಸೀಟ ಬರುತ್ತೆ. 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೀವಿ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!