Tuesday, March 28, 2023

Latest Posts

ಪುತ್ತೂರಿನ ಈಶ್ವರಮಂಗಲಕ್ಕೆ ಆಗಮಿಸಿದ ಅಮಿತ್ ಶಾಗೆ ಭರ್ಜರಿ ಸ್ವಾಗತ

ಹೊಸದಿಗಂತ ವರದಿ ಮಂಗಳೂರು:

ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಮಧ್ಯಾಹ್ನ 3 ಗಂಟೆ 8 ನಿಮಿಷದ ವೇಳೆಗೆ ಪುತ್ತೂರು ತಾಲೂಕಿನ ಈಶ್ವರಮಂಗಲಕ್ಕೆ ಆಗಮಿಸಿದ್ದಾರೆ.
ಈಶ್ವರಮಂಗಲದಲ್ಲಿ ಭಾರಿ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು, ಗಣ್ಯರು ಉಪಸ್ಥಿತರಿದ್ದು, ಗೃಹ ಸಚಿವರನ್ನು ಸ್ವಾಗತಿಸಿದರು.
ಬಳಿಕ ಅವರು ಈಶ್ವರಮಂಗಲ ಹನುಮಗಿರಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ನಂತರ ಪುತ್ತೂರು ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಕ್ಯಾಂಪ್ಕೊ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅಮಿತ್ ಶಾ, ರಾತ್ರಿ ಮಂಗಳೂರು ಕೆಂಜಾರಿನ ಶ್ರೀದೇವಿ ಕಾಲೇಜಿನಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸುವರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!