ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನದೇ ಗರ್ಲ್‌ಫ್ರೆಂಡ್ ಖಾಸಗಿ ಫೋಟೊಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.
26 ವರ್ಷದ ಸಂಜಯ್ ಕುಮಾರ್, 24 ವರ್ಷದ ಯುವತಿ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ. ವರ್ಷಗಳಿಂದ ಇಬ್ಬರಿಗೂ ಪರಿಚಯವಿದ್ದು, ಮದುವೆ ಬಗ್ಗೆಯೂ ಆಲೋಚನೆ ಮಾಡಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಯುವತಿ ಫೋಟೊಗಳನ್ನು ತಿರುಚಿದ ರೀತಿ ಅಪ್‌ಲೋಡ್ ಮಾಡಲಾಗಿತ್ತು, ಇದನ್ನು ಮಾಡಿದವರು ಯಾರು ಎಂದು ಗೊತ್ತಿಲ್ಲದೆ ಆರೋಪಿ ಜೊತೆಯೇ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.
ತನಿಖೆ ವೇಳೆ ಫೋಟೊಗಳು ಸಂಜಯ್ ಖಾತೆಯಿಂದಲೇ ಅಪ್‌ಲೋಡ್ ಆಗಿರುವ ಮಾಹಿತಿ ತಿಳಿದುಬಂದಿದೆ. ಈತ ಈ ರೀತಿ ಸಾಕಷ್ಟು ಜನರ ಫೋಟೊ ತಿರುಚಿದ್ದಾನೆ ಎಂದು ತಿಳಿದುಬಂದಿದೆ.