ಬುಡಕಟ್ಟು ಸಮುದಾಯದಲ್ಲೂ ಲಿವ್‌ ಇನ್‌ ರಿಲೇಷನ್‌ಶಿಪ್!

ಆಧುನಿಕ ಜಗತ್ತಿನಲ್ಲಿ ಸಂಪ್ರದಾಯಗಳು ಮಾಯವಾಗತೊಡಗಿದೆ. ಗ್ರಾಮೀಣ ಭಾಗಗಳಲ್ಲಿರುವ ಯುವಕರು ಉದ್ಯೋಗಕ್ಕಾಗಿಯೋ, ದುಡಿಮೆಗಾಗಿಯೋ ಪೇಟೆ ಪಟ್ಟಣಗಳನ್ನು ಆಶ್ರಯಿಸುತ್ತಿದ್ದಾರೆ. ತಮ್ಮ ಶಿಕ್ಷಣಕ್ಕೆ ಸರಿಯಾದ ಉದ್ಯೋಗ ಗ್ರಾಮೀಣ ಭಾಗಗಳಲ್ಲಿ ಸಾಧ್ಯವೇ ಇಲ್ಲ ಎಂಬ ಸತ್ಯ ಅರಿತೊಡನೆ ಮನೆಯಿಂದ ದೂರ ಬಂದು ಬಿಡುತ್ತಾರೆ. ಹೈಟೆಕ್‌ ಸಿಟಿಗಳಲ್ಲಿ, ರಂಗು ರಂಗಿನ ಕಟ್ಟಡದ ಎ.ಸಿ.ರೂಮುಗಳೊಳಗಿರುವ ಪ್ರಂಚದೊಳಗೆ ಸೇರಿ ಬಿಡುತ್ತಾರೆ. ಹೊಸ ಪ್ರಪಂಚದ ರುಚಿ ಅನುಭವಿಸಲಾರಂಭಿಸುತ್ತಾರೆ.

ಈ ಎಲ್ಲಾ ಕಾರಣಗಳಿಂದಾಗಿ ಗ್ರಾಮಗಳು ಇಂದು ʻವೃದ್ಧಾಶ್ರಮʼವಾಗುತ್ತಾ ಸಾಗುತ್ತಿವೆ. ವರ್ಷಕ್ಕೊಮ್ಮೆಯೋ ಎರಡು ಬಾರಿಯೋ ತುರ್ತಾಗಿ ಊರಿಗೆ ಬಂದು ಹೋಗುವ ಮಕ್ಕಳ ಸಂಖ್ಯೆಯೇ ಹೆಚ್ಚು. ಮನೆ ಬಿಟ್ಟರೆ ಕಚೇರಿ ಎಂಬಷ್ಟೇ ಜೀವನ ಅದೆಷ್ಟೋ ಜನರಿಗೆ. ಸಂಬಂಧಗಳ ಅರಿವೇ ಇಲ್ಲ. ಬಂಧುಗಳ ಪರಿಚಯವೇ ಇಲ್ಲ ಎಂಬ ಸ್ಥಿತಿಯೂ ಅದೆಷ್ಟೋ ಮನೆಗಳಲ್ಲಿವೆ.

ಮನೆ ಬಿಟ್ಟು ಉದ್ಯೋಗಕ್ಕಾಗಿ ಬಂದ ಹದಿಹರೆಯದ ಯುವಕ ಯುವತಿಯರು ಆಧುನಿಕತೆಯ ಸೋಗಿನಲ್ಲಿ ಲೀವ್‌ ಇನ್‌ ಟುಗೆದರ್‌ ಪರಿಕಲ್ಪನೆಯನ್ನು ಬೆಳೆಸಿಕೊಂಡಿರುವುದು ಇಂದಿನ ದಿನಗಳಲ್ಲಿ ಸರ್ವೇ ಸಾಮಾನ್ಯ. ಮದುವೆಯೇ ಬೇಡ. ನಾವು ಜೊತೆಯಾಗಿದ್ದೇವೆ ಎಂಬ ನಿರ್ಧಾರ ಅನೇಕರದ್ದಿದೆ. ಇದು ಆಧುನಿಕರಲ್ಲಿ ಮಾತ್ರವೇ ಎಂಬ ಪ್ರಶ್ನೆ ಅನೇಕ ಬಾರಿ ಕಾಡುತ್ತಿರುತ್ತದೆ. ಖಂಡಿತಾ ಅಲ್ಲ. ಹಿಂದುಳಿದ ಜನಾಂಗಗಳಲ್ಲೂ ಈ ಪರಿಕಲ್ಪನೆ ಇಂದಿಗೂ ಜೀವಂತವಾಗಿದೆ ಎಂದರೆ ಅಚ್ಚರಿಯಾಗದಿರದೇ?

ಬುಡಕಟ್ಟು ಸಮುದಾಯಗಳು ಹಳೆಯ ಸಂಪ್ರದಾಯವನ್ನು ಅಂಟಿಕೊಂಡೇ ಬದುಕುತ್ತಿದ್ದಾರೆ. ಮುಖ್ಯವಾಹಿನಿಗೆ ಬರುತ್ತಿಲ್ಲ ಎಂಬ ಕಲ್ಪನೆ ಅನೇಕರಿಗಿದೆ. ಆದರೆ ಬುಡಕಟ್ಟು ಸಮುದಾಯದ ಆಚರಣೆಗಳು ಇಂದಿನ ಆಧುನಿಕ ಸಮುದಾಯಕ್ಕೆ ಕಡಿಮೆಯಿಲ್ಲ ಎಂಬಷ್ಟರ ಮಟ್ಟಿಗೆ ಬೆಳೆದಿದೆ.

ಚೀನಾ ದೇಶದಲ್ಲಿರುವ ʻಮೊಸುವಾʼ ಎಂಬ ಬುಡಕಟ್ಟು ಸಮುದಾಯ ಸಹಸ್ರಾರು ವರುಷಗಳ ಹಿಂದಿನಿಂದಲೇ ಲಿವ್‌ ಇನ್‌ ಟುಗೆದರ್‌ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಇಲ್ಲಿನ ಮಹಿಳೆಯರು ಪುರುಷರ ಜೊತೆಗೆ ಜೀವನ ಪರ್ಯಂತ ಬಾಳುವ ಆಸಕ್ತಿ ಹೊಂದದೆ ಕೇವಲ ಮಕ್ಕಳನ್ನು ಪಡೆಯುವುದಕ್ಕೆ ಮಾತ್ರ ಪುರಷರೊಂದಿಗೆ ಸಂಬಂಧ ಹೊಂದುತ್ತಾರೆ! ತಾವು ಗರ್ಭಿಣಿ ಎಂದು ಗೊತ್ತಾಗುತ್ತಲೇ ಪುರುಷರನ್ನು ಮನೆಯಿಂದ ಹೊರಹಾಕುತ್ತಾರಂತೆ! ನೈಋತ್ಯ ಚೀನಾದ ಮೊಸುವಾ ಬುಡಕಟ್ಟು ಸಮುದಾಯ ಈ ರೀತಿಯ ವಿಶಿಷ್ಟ ಆಚರಣೆಯನ್ನು ಮಾಡುತ್ತಿದೆ. ಇಲ್ಲಿ ʻಮದುವೆʼಗೆ ಅವಕಾಶವಿಲ್ಲ. ಹಾಗಂತ ಪುರಷರು ಹಾಗೂ ಮಹಿಳೆಯರು ಒಟ್ಟಿಗೆ ಮಲಗುತ್ತಾರೆ!. ಮಹಿಳೆ ಗರ್ಭಿಣಿಯಾದ ನಂತರ ಪುರಷನ ಅವಶ್ಯಕತೆ ಆಕೆಗಿರುವುದಿಲ್ಲ. ಮಗುವನ್ನು ಪಡೆದ ಮಹಿಳೆ ಒಂಟಿಯಾಗಿಯೇ ಮಗುವನ್ನು ಬೆಳೆಸುತ್ತಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!