ಸಮಾಜದಲ್ಲಿ ಲಿವ್ ಇನ್ ರಿಲೇಷನ್‌ಶಿಪ್ ಸ್ವೀಕಾರಾರ್ಹವಲ್ಲ: ಅಲಹಾಬಾದ್ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮಾಜದಲ್ಲಿ ಲಿವ್ ಇನ್ ರಿಲೇಷನ್‌ಶಿಪ್ (Live-in Relationship) ಸ್ವೀಕಾರಾರ್ಹವಲ್ಲ . ಸಂಬಂಧ ಮುರಿದ ಬಳಿಕ ಮಹಿಳೆಯು ಒಬ್ಬಂಟಿಯಾಗಿ ವಾಸಿಸುವುದು ಕಷ್ಟವಾಗುತ್ತದೆ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸುಳ್ಳು ಮದುವೆ ಭರವಸೆ ಮತ್ತು ಅತ್ಯಾಚಾರ ಪ್ರಕರಣವೊಂದರಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಸಿದಜಸ್ಟೀಸ್ ಸಿದ್ಧಾರ್ಥ್ ಅವರ ನೇತೃತ್ವದ ಪೀಠವು, ಲಿವ್-ಇನ್ ರಿಲೇಷನ್‌ಶಿಪ್ ಮುರಿದುಬಿದ್ದ ನಂತರ ಮಹಿಳೆ ಒಂಟಿಯಾಗಿ ಬದುಕುವುದು ಕಷ್ಟ. ಭಾರತೀಯ ಸಮಾಜವು ಅಂತಹ ಸಂಬಂಧಗಳನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಮಹಿಳೆಗೆ ಪ್ರಸ್ತುತ ಪ್ರಕರಣದಂತೆ ತನ್ನ ಲೈವ್-ಇನ್ ಪಾಲುದಾರರ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ಸಲ್ಲಿಸುವುದನ್ನು ಬಿಟ್ಟು ಬೇರೆ ಆಯ್ಕೆಯಿಲ್ಲ ಎಂದು ಹೇಳಿದೆ.

ಭಾರತೀಯ ದಂಡಸಂಹಿತೆಯಡಿ ಮಹಿಳೆಯೊಬ್ಬರು ಸುಳ್ಳು ಮದುವೆ ಭರವಸೆ ಮತ್ತು ಅತ್ಯಾಚಾರ ಕೇಸ್ ದಾಖಲಿಸಿದ್ದರು.ಆರೋಪಿಯು ಒಂದೂವರೆ ವರ್ಷದಿಂದ ತನ್ನ ಜತೆ ಲಿವ್ ಇನ್ ಸಂಬಂಧದಲ್ಲಿದ್ದ. ಇದರಿಂದ ಗರ್ಭಿಣಿಯಾಗಿದ್ದೆ. ಆ ಬಳಿಕ ಅಥವಾ ಆರೋಪಿ ತನ್ನನ್ನು ಮದುವೆಯಾಗಲು ನಿರಾಕರಿಸಿದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. ಸಂತ್ರಸ್ತೆಗೆ ಈ ಮೊದಲೇ ವಿವಾಹವಾಗಿದ್ದು, ಎರಡು ಮಕ್ಕಳು ಕೂಡ ಇವೆ. ಆದರೆ, ಆರೋಪಿಯು ತಮ್ಮಿಬ್ಬರ ಖಾಸಗಿ ಫೋಟೋಗಳನ್ನು ಮೊದಲನೇ ಗಂಡನಿಗೆ ಕಳುಹಿಸಿದ್ದರಿಂದ ಆತ ತನ್ನನ್ನು ತ್ಯಜಿಸಿದ್ದಾನೆ ಎಂದು ಆಕೆ ತನ್ನ ವಾದದಲ್ಲಿ ತಿಳಿಸಿದ್ದಾಳೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!