ಛಲ ಬಿಡದ ಗುರಿ ತಲುಪಿದ ಸೂಫಿಯಾ ಸೂಫಿ: ನಾಲ್ಕನೇ ಬಾರಿ ಗಿನ್ನೆಸ್​​ ದಾಖಲೆ ಓಟಗಾರ್ತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಬಹು-ದೂರದ ಓಟಗಾರ್ತಿ ಸೂಫಿಯಾ ಸೂಫಿ (Sufiya Sufi) ಮತ್ತೊಂದು ಗಿನ್ನೆಸ್​ ದಾಖಲೆ ಬರೆದಿದ್ದಾರೆ.ಇದರೊಂದಿಗೆ ಒಟ್ಟು ನಾಲ್ಕು ಗಿನ್ನೆಸ್​ ದಾಖಲೆ ಬರೆದ ಹಿರಿಮೆಗೆ ಪಾತ್ರರಾಗಿದ್ದಾರೆ.

ಕತಾರ್​ನಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಸೂಫಿ ಅವರು 200 ಕಿ. ಮೀ.ಗೂ ಅಧಿಕ ದೂರವನ್ನು 30 ಗಂಟೆ 34 ನಿಮಿಷಗಳಲ್ಲಿ ಕ್ರಮಿಸುವ ಮೂಲಕ ತಮ್ಮ 4ನೇ ಗಿನ್ನೆಸ್​ ದಾಖಲೆಯನ್ನು (Guiness World Record) ಬರೆದಿದ್ದಾರೆ.

ಈ ಓಟದ ವೇಳೆ ಅವರು ಮೂರು ಬಾರಿ ಹೊಟ್ಟೆ ನೋವಿನ ಸಮಸ್ಯೆಗೆ ತುತ್ತಾಗಿದ್ದರೂ ಛಲ ಬಿಡದ ಅವರು ಗುರಿ ತಲುಪಿ ಇತಿಹಾಸ ನಿರ್ಮಿಸುವಲ್ಲಿ ಯಶಸ್ಸು ಕಂಡಿದ್ದಾರೆ.

ಜನವರಿಯಲ್ಲಿ ಅಬು ಸಮ್ರಾದಿಂದ ಆರಂಭವಾದ ಈ ಓಟ ದೋಹಾ ಮೂಲಕ ಹಾದು ಅಲ್ ರುಯೆಜ್‌ನಲ್ಲಿ ಕೊನೆಗೊಂಡಿತು. ಭಾರತದಲ್ಲಿ ಅಲ್ಟ್ರಾ ರೇಸ್​ನಲ್ಲಿ ಈಗಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ರಾಜಸ್ಥಾನ ಮೂಲದ ಸೂಫಿಯಾ ಸೂಫಿ ಅವರು ಓಟಗಾರ್ತಿಯಾಗುವ​ ಮೊದಲು ಏರ್​ಲೈನ್​ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!