Monday, September 25, 2023

Latest Posts

SHOCKING| ಆಸ್ಟ್ರೇಲಿಯಾದ ಮಹಿಳೆಯ ಮೆದುಳಿನಲ್ಲಿ ಜೀವಂತ ಹುಳು ಪತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವದಲ್ಲೇ ಪ್ರಥಮ ಬಾರಿಗೆ ಮಹಿಳೆಯ ಮೆದುಳಿನಲ್ಲಿ ಪರಾವಲಂಬಿ ಜೀವಿ ಇರುವುದನ್ನು ವೈದ್ಯರು ಪತ್ತೆ ಮಾಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯನ್ನು ಪರೀಕ್ಷಿಸಿದ ವೈದ್ಯರಿಗೆ ಶಾಕ್‌ ಕಾದಿತ್ತು.

64 ವರ್ಷದ ಆಸ್ಟ್ರೇಲಿಯಾದ ಮಹಿಳೆಯ ಮೆದುಳಿನಲ್ಲಿ ವೈದ್ಯರು ಪರಾವಲಂಬಿ ಜೀವಿಯನ್ನು ಪತ್ತೆ ಮಾಡಿದ್ದಾರೆ. ಕ್ಯಾನ್‌ಬೆರಾ ಮೂಲದ ಸಾಂಕ್ರಾಮಿಕ ರೋಗ ತಜ್ಞ ಡಾ.ಸಂಜಯ ಸೇನಾನಾಯಕ ಆಘಾತಕಾರಿ ಪ್ರಕರಣವನ್ನು ವಿವರಿಸಿದರು.

ಕಳೆದ ಎರಡು ವರ್ಷಗಳಿಂದ, ಮಹಿಳೆಯು ನ್ಯುಮೋನಿಯಾ, ಹೊಟ್ಟೆ ನೋವು, ಅತಿಸಾರ, ಒಣ ಕೆಮ್ಮು, ಜ್ವರ, ರಾತ್ರಿ ಬೆವರುವಿಕೆ, ಖಿನ್ನತೆ ಮತ್ತು ಜ್ಞಾಪಕ ಶಕ್ತಿ ನಷ್ಟ ಸೇರಿದಂತೆ ಹಲವಾರು ರೋಗಲಕ್ಷಣಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರು. MRI ಸ್ಕ್ಯಾನ್ ನಂತರ, ವೈದ್ಯಕೀಯ ತಜ್ಞರು ಶಸ್ತ್ರಚಿಕಿತ್ಸೆ ನಡೆಸಿ ಕೆಂಪು ಬಣ್ಣದಲ್ಲಿರುವ 3 ಇಂಚು ಉದ್ದದ ಪರಾವಲಂಬಿ ಜೀವಿಯನ್ನು ತೆಗೆದುಹಾಕಲಾಗಿದೆ. ಇದನ್ನು ವೈಜ್ಞಾನಿಕವಾಗಿ ‘Ophidascaris Robertsii’ ಎಂದು ಕರೆಯಲಾಗುತ್ತದೆ. ಮಾನವರಲ್ಲಿ ಪರಾವಲಂಬಿ ದಾಖಲಾದ ಮೊದಲ ಪ್ರಕರಣ ಇದಾಗಿದೆ.

ಇದು ಅಪರೂಪದ ಪ್ರಕರಣವಾದರೂ ಮಹಿಳೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!