ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಆಹಾರದಲ್ಲಿ ಹಲ್ಲಿ ಪತ್ತೆ, ಗ್ರಾಹಕ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗ್ರೇಟರ್ ನೋಯ್ಡಾದಲ್ಲಿ ವ್ಯಕ್ತಿಯೊಬ್ಬ ಝೊಮ್ಯಾಟೊದಿಂದ ಆಹಾರ ಆರ್ಡರ್ ಮಾಡಿದ್ದು, ಅದರಲ್ಲಿ ಸತ್ತಿರುವ ಹಲ್ಲಿ ಪತ್ತೆಯಾಗಿದೆ.

ಗ್ರಾಹಕ ಕೌಸ್ತವ್ ಕುಮಾರ್ ಸಿನ್ಹಾ ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದು, ಕಂಪನಿಗೆ ದೂರು ನೀಡಿದ್ದಾರೆ. ಗ್ರೇಟರ್ ನೊಯ್ಡಾದ ವೆಸ್ಟ್‌ನಲ್ಲಿರುವ ಪಂಜಾಬಿ ರಸೋಯಿ ರೆಸ್ಟೋರೆಂಟ್‌ನಿಂದ ಆಹಾರ ಆರ್ಡರ್ ಮಾಡಿದ್ದು, ಊಟದ ಡಬ್ಬಿ ತೆಗೆದ ತಕ್ಷಣ ಹಲ್ಲಿ ಕಾಣಿಸಿದೆ ಎಂದಿದ್ದಾರೆ.

ತಿನ್ನುವ ಊಟದಲ್ಲಿ ಸತ್ತ ಹಲ್ಲಿ ಕಂಡು ಬೆಚ್ಚಿಬಿದ್ದೆ, ವಾಕರಿಕೆ ಬಂದಿದೆ. ಕೋವಿಡ್ ಮಧ್ಯೆ ಇದೆಲ್ಲ ಉದ್ದೇಶಪೂರ್ವಕವಾಗಿ ನಡೆಯುತ್ತಿದೆ ಎನಿಸುತ್ತಿದೆ ಇದೊಂದು ಕೆಟ್ಟ ಅನುಭವ, ಇನ್ನೂ ಸ್ವಲ್ಪ ದಿನ ಊಟ ಮಾಡೋದಕ್ಕೂ ಯೋಚಿಸಬೇಕಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೊಸ್ ವೈರಲ್ ಆಗುತ್ತಿದ್ದು, ಜನರೂ ಆನ್‌ಲೈನ್ ಫುಡ್ ಎಂದರೆ ಮುಖ ಮುರಿಯುವಂತಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!