ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಭಾರತದಲ್ಲಿ ಲೋಹ್ರಿ ಸಂಭ್ರಮ ಮನೆಮಾಡಿದ್ದು, ಜಮ್ಮು ಮತ್ತು ಕಾಶ್ಮೀರ ಗಡಿಯಲ್ಲಿ ಸೈನಿಕರು ಸಂಭ್ರಮಾಚರಣೆ ನಡೆಸಿದ್ದಾರೆ.
ಉತ್ತರ ಭಾರತದಲ್ಲಿ ವಿಶೇಷವಾಗಿ ಲೋಹ್ರಿ ಆಚರಣೆ ಪದ್ಧತಿಯಿದ್ದು, ಭಾರತೀಯ ಸೈನಿಕರು ಗಡಿಯಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಬೆಂಕಿಯ ಮುಂದೆ ಹಾಡುತ್ತಾ, ಕುಣಿಯುತ್ತಾ ಸಂಭ್ರಮಿಸೋದು ಈ ಹಬ್ಬದ ವಿಶೇಷತೆ. ಕುಟುಂಬಗಳಿಂದ ದೂರ ಇದ್ದರೂ, ಇರುವವರನ್ನೇ ಕುಟುಂಬ ಎಂದುಕೊಂಡು ಸೈನಿಕರು ನೃತ್ಯದಲ್ಲಿ ತೊಡಗಿರುವ ವಿಡಿಯೋ ವೈರಲ್ ಆಗಿದೆ. ಹೆಚ್ಚಿನ ನೃತ್ಯಗಳು ಪಂಜಾಬಿ ಆಗಿದ್ದು, ಭಾಂಗ್ರಾ ನೃತ್ಯ ಮಾಡಿ ಸೈನಿಕರು ಖುಷಿಪಟ್ಟಿದ್ದಾರೆ.
#WATCH: Jammu and Kashmir | BSF personnel celebrate #Lohri in Poonch district pic.twitter.com/Mu4R2OQkYj
— ANI (@ANI) January 13, 2022