ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಸುಕೇಶ್ ಚಂದ್ರಶೇಖರ್ ಖಾಸಗಿ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ, ಜಾಕ್ವೆಲಿನ್ ಅಧ್ಯಾತ್ಮದ ಮೊರೆ ಹೋಗಿದ್ದಾರಂತೆ!
ಹೌದು, 200 ಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಜೊತೆ ಜಾಕ್ವೆಲಿನ್ ಒಡನಾಟ ಇಟ್ಟುಕೊಂಡಿದ್ದರು. ಇದರಿಂದ ಇವರೂ ಕೂಡ ವಿಚಾರಣೆಗೆ ಒಳಪಡುವಂತಾಯ್ತು.
ಜತೆಗೆ ಇವರಿಬ್ಬರ ಖಾಸಗಿ ಫೋಟೊಗಳು ವೈರಲ್ ಆಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್‌ಗಳಿಗೆ ಈ ಫೋಟೊಗಳು ಆಹಾರವಾಗಿದೆ. ಇಷ್ಟೆಲ್ಲಾ ಆಗಿದ್ದರಿಂದ ಮಾನಸಿಕವಾಗಿ ಕುಗ್ಗಿರೋ ನಟಿ ಅಧ್ಯಾತ್ಮದ ಮೊರೆ ಹೋಗಿದ್ದಾರಂತೆ. ಅಧ್ಯಾತ್ಮ ಪುಸ್ತಕಗಳನ್ನು ಓದುವುದು, ಯೋಗ, ಧ್ಯಾನ ಹೆಚ್ಚು ಮಾಡುತ್ತಿದ್ದಾರಂತೆ. ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಮನೆಯಲ್ಲೇ ಇದ್ದು, ಹೀಲಿಂಗ್ ಪ್ರೊಸೆಸ್‌ನಲ್ಲಿದ್ದಾರಂತೆ.