ಲೋಕಸಭಾ ಚುನಾವಣೆ 2024: ಯುವ ಮತದಾರರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಲಹೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ X ನಲ್ಲಿ ದೇಶದ ಪ್ರತಿ ಮತದಾರರಿಗೂ ವಿಶೇಷ ಸಲಹೆ ನೀಡಿದ್ದಾರೆ.

2024 ರ ಲೋಕಸಭೆ ಚುನಾವಣೆಯು ಇಂದಿನಿಂದ ಪ್ರಾರಂಭವಾಗುತ್ತದೆ! 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಸ್ಥಾನಗಳಿಗೆ ಚುನಾವಣೆಗೆ ನಡೆಯುತ್ತಿರುವ ಕಾರಣ, ಈ ಸ್ಥಾನಗಳಲ್ಲಿ ಮತ ಚಲಾಯಿಸುವವರೆಲ್ಲರೂ ತಮ್ಮ ಹಕ್ಕುಗಳನ್ನು ದಾಖಲೆ ಸಂಖ್ಯೆಯಲ್ಲಿ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ವಿಶೇಷವಾಗಿ ಯುವ ಪೀಳಿಗೆ ಮತ್ತು ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಕರೆ ನೀಡುತ್ತೇನೆ. ಪ್ರತಿ ಮತದಾರರ ಒಂದು ಮತ ಈ ದೇಶದ ಅಭಿವೃದ್ಧಿ ಹಾಗೂ ಸಮಾನತೆಯನ್ನು ಬಲಪಡಿಸುವುದು ಎಂದು ತಿಳಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!