ಲೋಕಸಭೆ ಚುನಾವಣೆ 2024: ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಮತ ಚಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ ಇಂದು ಮಹತ್ವದ ದಿನವಾಗಿದ್ದು ಲೋಕಸಭೆ ಚುನಾವಣೆ 2024 ರ ಚುನಾವಣಾ ರಂಗು ಈಗಾಗಲೇ ಎಲ್ಲೆಡೆ ಪ್ರಾರಂಭವಾಗಿದೆ.

ಇದೀಗ ತಮಿಳುನಾಡಿನ ಮತದಾನದ ಭಾಗವಾಗಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಮತದಾನ ಮಾಡಿದ್ದು, ಇಂದು ಶುಕ್ರವಾರ ಬೆಳಗ್ಗೆ ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ.

ನಟನನ್ನು ಮತಗಟ್ಟೆಯಲ್ಲಿ ಕಂಡ ಅಭಿಮಾನಿಗಳು ಅವರನ್ನ ನೋಡಲು ಮುಗಿಬಿದ್ದಿದ್ದಾರೆ. ಸದ್ಯ ಮತಗಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!