ಜೈಲಿನಲ್ಲೇ ಕೇಜ್ರಿವಾಲ್‌ ಹತ್ಯೆಗೆ ಸಂಚು? ಸಚಿವೆಯಿಂದ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಿಹಾರ್‌ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹತ್ಯೆಗೆ ಬಿಜೆಪಿ ಸಂಚು ರೂಪಿಸಿದೆ ಎಂದು ಸಚಿವೆ ಆತಿಷಿ ಮರ್ಲೇನಾ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ.

ಕೇಜ್ರಿವಾಲ್​​ಗೆ ಟೈಪ್​-2 ಡಯಾಬಿಟಿಸ್ ಇದ್ದು ಗಂಭೀರ ಸ್ಥಿತಿಯಲ್ಲಿದ್ದಾರೆ. ಜೈಲಿನಲ್ಲಿ ಪದೇ ಪದೆ ಮನವಿ ಮಾಡಿದ್ರೂ ಇನ್ಸುಲಿನ್ ಕೊಡದೇ ಅವರನ್ನು ಕೊಲ್ಲುವ ಷಡ್ಯಂತ್ರ ರೂಪಿಸಲಾಗಿದೆ. ಕಳೆದ 30 ವರ್ಷಗಳಿಂದ ಅವರಿಗೆ ಈ ಸಕ್ಕರೆ ಕಾಯಿಲೆ ಇದೆ. ಕೇಜ್ರಿವಾಲ್ ಶುಗರ್ ಕಂಟ್ರೋಲ್​​​ನಲ್ಲಿಡಲು ಪ್ರತಿದಿನ 46 ರಿಂದ 54 ಯುನಿಟ್​​ವರೆಗೆ ಇನ್ಸುಲಿನ್ ಪಡೆಯುತ್ತಾರೆ. ಯಾವುದೇ ವೈದ್ಯರನ್ನು ಕೇಳಿ 54 ಯುನಿಟ್ ಇನ್ಸುಲಿನ್ ಪಡೆಯುವ ವ್ಯಕ್ತಿ ತೀವ್ರ ಡಯಾಬಿಟಿಸ್​ ಎದುರಿಸುತ್ತಿರುವ ವ್ಯಕ್ತಿ ಎಂದೇ ಹೇಳುತ್ತಾರೆ.

ಜೈಲಿನಲ್ಲಿ ಕೇಜ್ರಿವಾಲ್‌ಗೆ ಇನ್ಸುಲಿನ್‌ ನೀಡುತ್ತಿಲ್ಲ. ಅವರನ್ನು ಕೊಲ್ಲಲು ಬಿಜೆಪಿ ಷಡ್ಯಂತ್ರ ಇದಾಗಿದೆ. ಕೇಜ್ರಿವಾಲ್‌ ಜನಪ್ರಿಯತೆ ಕಂಡು ಬಿಜೆಪಿ ಹೆದರಿದೆ. ಅವರನ್ನು ಚುನಾವಣೆಯಲ್ಲಿ ಎದುರಿಸಲಾಗದೆ ಅಡ್ಡದಾರಿ ಹಿಡಿದು ಜೈಲಿನಲ್ಲಿ ಕೊಲ್ಲುವ ಪ್ಲಾನ್‌ ಮಾಡಿದೆ ಎಂದು ಹೇಳಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!