ಲೋಕಸಭಾ ಚುನಾವಣೆ: ಪಂಜಾಬಿನ 8 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಆಪ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭಾ ಚುನಾವಣೆಗೆ ಪಂಜಾಬ್‌ನಲ್ಲಿ ಯಾವುದೇ ಮೈತ್ರಿ ಎಲ್ಲ ಎಂದು ಘೋಷಿಸಿರುವ ಆಪ್, ಇದೀಗ ಮೊದಲ ಪಟ್ಟಿ ಪ್ರತಟಿಸಿದೆ.

13 ಲೋಕಸಭಾ ಕ್ಷೇತ್ರಗಳ ಬೈಕಿ 8 ಕ್ಷೇತ್ರಗಳಿಗೆ ಆಪ್ ಅಭ್ಯರ್ಥಿಗಳನ್ನು ಘೋಷಿಸಿದೆ. ಕಾಂಗ್ರೆಸ್ ತೊರೆದು ಆಪ್ ಸೇರಿದ ನಾಯಕನಿಗೂ ಟಿಕೆಟ್ ನೀಡಲಾಗಿದೆ. ಪಂಜಾಬ್ ಸಂಪುಟದ 5 ಸಚಿವರಿಗೂ ಟಿಕೆಟ್ ಘೋಷಿಸಿದೆ. ಜೊತೆಗೆ ಒಬ್ಬ ಹಾಲಿ ಸಂಸದನಿಗೂ ಆಪ್ ಟಿಕೆಟ್ ನೀಡಿದೆ.

ಭಗವಂತ್ ಮಾನ್ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಡಾ.ಬಲ್ಬೀರ್ ಸಿಂಗ್, ಕೃಷಿ ಸಚಿವ ಗುರ್ಮೀತ್ ಸಿಂಗ್ ಖುದಿಯಾನ್, ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀಟ್ ಹೆಯರ್, NRI ಸಚಿವಾಲಯದ ಸಚಿವ ಕುಲ್ದೀಪ್ ಸಿಂಗ್ ಧಲೀಲವಾಲ್, ಸಾರಿಗೆ ಸಚಿವ ಲಲ್ಜಿತ್ ಸಿಂಗ್ ಭುಲ್ಲಾರ್‌ಗೆ ಟಿಕೆಟ್ ನೀಡಿಲಾಗಿದೆ. ಜಲಂಧರ್‌ನಿಂದ ಆಪ್ ಹಾಲಿ ಸಂಸದ ಸುಶೀಲ್ ಕುಮಾರ್ ರಿಂಗ್ ಹಾಗೂ ಕಾಂಗ್ರೆಸ್‌ನಿಂದ ಆಪ್ ಸೇರಿಕೊಂಡ ಮಾಜಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ , ಪಂಜಾಬ್ ನಟ ಕರಮಜೀತ್ ಅನ್ಮೋಲ್‌ಗೆ ಟಿಕೆಟ್ ನೀಡಲಾಗಿದೆ.

ಇಂಡಿಯಾ ಮೈತ್ರಿ ಒಕ್ಕೂಟ ಆಮ್ ಆದ್ಮಿ ಪಾರ್ಟಿ ಜೊತೆ ದೆಹಲಿ, ಗುಜರಾತ್ ಹಾಗೂ ಹರ್ಯಾಣದಲ್ಲಿ ಸೀಟು ಹಂಚಿಕೆ ಮಾಡಿದೆ.ಆದರೆ ಆಪ್ ಮೊದಲೇ ಘೋಷಿಸದಂತೆ ಪಂಜಾಬ್‌ನಲ್ಲಿ ಏಕಾಂಗಿಯಾಗಿ ಹೋರಾಟ ನಡೆಸುತ್ತಿದೆ. ಇನ್ನುಳಿದ 5 ಕ್ಷೇತ್ರಗಳಿಗೆ ಶೀಘ್ರದಲ್ಲೇ ಆಪ್ ಅಭ್ಯರ್ಥಿಗಳ ಘೋಷಣೆ ಮಾಡಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!