ಜಸ್ಟ್ 7 ನಿಮಿಷದ ಮೀಟಿಂಗ್: ಉದ್ಯೋಗ ಕಡಿತ ಘೋಷಿಸಿದ IBM!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಕ್ ಕಂಪನಿಗಳ ಪೈಕಿ ದಿಗ್ಗಜ ಐಬಿಎಂ ಏಕಾಏಕಿ ಉದ್ಯೋಗ ಕಡಿತ ಘೋಷಣೆ ಮಾಡಿದೆ.

ಉದ್ಯೋಗಿಗಳ ಮೀಟಿಂಗ್ ಕರೆದ ಕಂಪನಿ, ಕೇವಲ 7 ನಿಮಿಷದಲ್ಲಿ ಮೀಟಿಂಗ್ ಮುಗಿಸಿದೆ. ಇದಾದ ಬಳಿಕ ಐಬಿಎಂನ ಎರಡು ವಿಭಾಗದಲ್ಲಿ ಉದ್ಯೋಗ ಕಡಿತ ಮಾಡುವುದಾಗಿ ಘೋಷಿಸಿದೆ ಎಂದು ಸಿಎನ್‌ಎನ್ ಸೇರಿದಂತೆ ಆಂಗ್ಲ ಮಾಧ್ಯಮಗಳು ವರದಿ ಮಾಡಿದೆ.

ಉದ್ಯೋಗ ಕಡಿತದ ಸಂಖ್ಯೆ ಬಹಿರಂಗಪಡಿಸಿಲ್ಲ. ಐಬಿಎಂ ಈ ಘೋಷಣೆಯಿಂದ ಇದೀಗ ಉದ್ಯೋಗಿಗಳಲ್ಲಿ ನಡುಕು ಶುರುಕವಾಗಿದೆ.

ಐಬಿಎಂ ಚೀಫ್ ಕಮ್ಯೂನಿಕೇಶನ್ ಆಫೀಸರ್ ಜೋನಾಥನ್ ಆದಾಶೇಕ್ ಇಂದು 7 ನಿಮಿಷಗಳ ಮೀಟಿಂಗ್ ನಡೆಸಿ ಈ ಘೋಷಣೆ ಮಾಡಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ. ಆದರೆ ಕಂಪನಿ ಅಧಿಕೃತ ಘೋಷಣೆ ಮಾಡಿಲ್ಲ.

ಕಳೆದ ವರ್ಷ ಅರವಿಂದ್ ಕೃಷ್ಣ ನೇಮಕಾತಿ ಕುರಿತು ಮಹತ್ವದ ಹೇಳಿಕೆ ನೀಡಿದ್ದರು. ಪ್ರಸಕ್ತ ವರ್ಷದಲ್ಲಿ ಐಬಿಎಂ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಘೋಷಿಸಿತ್ತು. ಇದೀಗ ಉದ್ಯೋಗ ಕಡಿತದ ಬಳಿಕ ಆರ್ಟಿಫೀಶಿಯಲ್ ಇಂಟಲಿಜೆನ್ಸಿ ಬಳಕೆಯಿಂದ ಐಬಿಎಂ ಕಂಪನಿಯ ಉದ್ಯೋಗ ಕಡಿತ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಹೀಗಾಗಿ ಉದ್ಯೋಗ ಕಡಿತದ ವರದಿ ಕಾರ್ಪೋರೇಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!