ಹೊಸದಿಗಂತ ಬೆಳಗಾವಿ :
ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜಿಲ್ಲೆಯ ಇಬ್ಬರು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ
ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ.
ಇಲ್ಲಿನ ಅನಗೋಳದ ಸಬ್ ರಿಜಿಸ್ಟರ್ ಸಚಿನ್ ಮುಂಡೇದ ಅವರ ಮೇಲೆ ಮೇಲೆ ಲೋಕಾಯುಕ್ತ ಎಸ್ಪಿ ಅನುಮಂತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಬೆಳಗಾವಿ ಉತ್ತರ ಸಬ್ ರಿಜಿಸ್ಟರ್ ಆಗಿರುವ ಸಚಿನ್ ಮೇಲೆ ಅಕ್ರಮ ಆಸ್ತಿ ಗಳಿಕೆಯ ಆರೋಪದ ಅಡಿ ಈ ದಾಳಿ ನಡೆಸಲಾಗಿದ್ದು ದಾಖಲೆ ಪರಿಶೀಲಿಸುತ್ತಿದೆ.
ಇನ್ನು, ಹಾರೂಗೇರಿ ಪಶುವೈದ್ಯ ಸಂಜಯ್ ದುರ್ಗಣ್ಣವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖವಟಕೊಪ್ಪದಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿರುನ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.