ಹೊಸದಿಗಂತ ವರದಿ ರಾಮನಗರ :
ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಹಲವಾರು ಕಡೆ ದಾಳಿ ನಡೆಸಿದ್ದು ಹಾರೋಹಳ್ಳಿ ತಹಸೀಲ್ದಾರ್ ವಿಜಿಯಣ್ಣ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಸಂಭಂದ ದಾಳಿ ನಡೆದಿದೆ ಎನ್ನಲಾಗಿದ್ದು ರಾಮನಗರ ಲೋಕಾಯುಕ್ತ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ.
ತಹಸೀಲ್ದಾರ್ ಅವರ ಮನೆ ಮತ್ತು ಕಚೇರಿಗಳ್ ಮೇಲೆ ದಾಳಿ ನಡೆಸಿ ಶೋಧಿಸುತ್ತಿರುವ ಅಧಿಕಾರಿಗಳ ತಂಡ.