ಹೊಸದಿಗಂತ ವರದಿ ಸುರಪುರ:
ನಗರದ ಹೊರವಲಯಲ್ಲಿರುವ ಕಾರ್ಯನಿರ್ವಾಹಕ ಅಭಿಯಂತರ, ಕಾರ್ಯ ಮತ್ತು ವಿಭಾಗ ಕಛೇರಿಯ ಮೇಲೆ ಯಾದಗಿರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ಪಿ ಮತ್ತು ಡಿಎಸ್ಪಿ ಅವರ ಮಾರ್ಗದರ್ಶನದಲ್ಲಿ ಮದ್ಯಾಹ್ನದ ವೇಳೆಗೆ ದಾಳಿ ನಡೆಸಲಾಗಿದ್ದು, ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದು, ಭ್ರಷ್ಟ ಅಧಿಕಾರಿಗಳನ್ನು ಲೋಕಾಯುಕ್ತ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ.
ತಿಂಥಣಿ ಗ್ರಾಮದ ನಿವಾಸಿ ದ್ವಿತೀಯ ದರ್ಜೆ ಗುತ್ತಿಗೆದಾರ ಬೈರಣ್ಣ ಅಂಬಿಗೇರ ನೀಡಿದ ದೂರಿನ ಮೇರೆಗೆ ದಾಳಿ ನಡೆಸಲಾಗಿದ್ದು ಕಲಂ 7(a), ಭ್ರಷ್ಟಾಚಾರ ತಡೆ ಕಾಯ್ದೆ, 1988 (ತಿದ್ದುಪಡಿ ಕಾಯ್ದೆ 2018) ಪ್ರಕರಣ ದಾಖಲಾಗಿದೆ.
ಅಧಿಕಾರಿಗಳಾದ ಸಚಿನ್ ಯೆಡಕೆ ಮತ್ತು ಶ್ರೀಶೈಲ ತಮ್ಮದಡ್ಡಿಇಬ್ಬರೂ ಜೆಸ್ಕಾಂ (GESCOM), ಸುರಪುರದ ಜೂನಿಯರ್ ಇಂಜಿನಿಯರ್ಗಳು (JE) ದಾಳಿಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳು.
ದ್ವಿತೀಯ ದರ್ಜೆ ಗುತ್ತಿಗೆದಾರ ಬೈರಣ್ಣ ಅಂಬಿಗರ ರವರಿಗೆ ಬಾಕಿ ಉಳಿದಿದ್ದ ಕೆಲಸ 8 ತಿಂಗಳ ಹಿಂದೆ ಪೂರ್ಣಗೊಂಡಿದ್ದ 3,63,942 ರೂಪಾಯಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡುವುದು ಬಾಕಿ ಇತ್ತು. ಈ ಕುರಿತು ಮಂಜೂರಾತಿ ಮಾಡಲು ಅಧಿಕಾರಿಗಳು 9,000 ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು. ಇಂದು 3000 ರೂಪಾಯಿ ಲಂಚ ಸ್ವೀಕರಿಸುತ್ತಿರುವ ವೇಳೆ ಇಬ್ಬರು ಆರೋಪಿಗಳು ಬಲೆಗೆ ಬಿದ್ದಿದ್ದು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:
ಕಾರ್ಯಾಚರಣೆ ವೇಳೆ ಯಾದಗಿರಿ ಕೆಎಲ್ಎ ಡಿಎಸ್ಪಿ ಜೆ. ಎಚ್. ಇನಾಮದಾರ್, ಪೊಲೀಸ್ ಇನ್ಸ್ಪೆಕ್ಟರ್ (PI), ಪ್ರದೀಪ್ ತಲಕೇರಿ ಹಾಗೂ ಕೆಎಲ್ಎ, ಯಾದಗಿರಿ ಘಟಕದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.



