ಇಂದಿನ ವೇಗದ ಜೀವನಶೈಲಿಯಲ್ಲಿ ಮಾನಸಿಕ ಒತ್ತಡ ಹಾಗೂ ಒಂಟಿತನ ಸಾಮಾನ್ಯ ಸಮಸ್ಯೆಯಾಗಿದೆ. ಆದರೆ, ಈ ಒಂಟಿತನವು ಕೇವಲ ಮಾನಸಿಕ ಆರೋಗ್ಯದ ಮೇಲಷ್ಟೇ ಅಲ್ಲದೆ, ನೇರವಾಗಿ ಹೃದಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಹಲವು ವೈದ್ಯಕೀಯ ಸಂಶೋಧನೆಗಳಿಂದ ದೃಢಪಟ್ಟಿದೆ.
ಒಂಟಿತನದಿಂದ ಹೃದಯಕ್ಕೆ ಹೇಗೆ ಹಾನಿಯಾಗುತ್ತದೆ?
ದೀರ್ಘಕಾಲದ ಒಂಟಿತನವು ದೇಹದಲ್ಲಿ ಒತ್ತಡದ ಹಾರ್ಮೋನ್‌ಗಳಾದ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತನಾಳಗಳು ಮುಚ್ಚಿ, ರಕ್ತದೊತ್ತಡ (BP) ದಿಢೀರನೆ ಏರಿಕೆಯಾಗುತ್ತದೆ.
ಸಾಮಾಜಿಕ ಸಂಪರ್ಕದಿಂದ ದೂರವಿರುವವರಲ್ಲಿ ಪಾರ್ಶ್ವವಾಯು ಮತ್ತು ಹೃದಯಾಘಾತ ಸಂಭವಿಸುವ ಸಾಧ್ಯತೆ ಶೇಕಡಾ 30% ಕ್ಕಿಂತ ಹೆಚ್ಚಿರುತ್ತದೆ.
ಒಂಟಿತನವು ದೇಹದಲ್ಲಿ ಸೈಲೆಂಟ್ ಉರಿಯೂತವನ್ನು ಉಂಟುಮಾಡುತ್ತದೆ. ಇದು ಹೃದಯಕ್ಕೆ ರಕ್ತ ಪೂರೈಸುವ ಅಪಧಮನಿಗಳನ್ನು ಹಾನಿಗೊಳಿಸುತ್ತದೆ.
ಏಕಾಂಗಿಯಾಗಿರುವ ವ್ಯಕ್ತಿಗಳು ದೈಹಿಕ ವ್ಯಾಯಾಮ ಕಡಿಮೆ ಮಾಡುವುದು, ಧೂಮಪಾನ, ಅತಿಯಾದ ಮದ್ಯಪಾನ ಮತ್ತು ಅಸಮತೋಲಿತ ಆಹಾರ ಪದ್ಧತಿಗೆ ಬೇಗನೆ ತಳ್ಳಲ್ಪಡುತ್ತಾರೆ. ಇದು ಹೃದಯದ ಮೇಲಿನ ಹೊರೆ ಹೆಚ್ಚಿಸುತ್ತದೆ.
ಪಾಸಿಟಿವ್ ಹೆಜ್ಜೆ: ಒಂಟಿತನ ಗೆದ್ದು ಹೃದಯವನ್ನು ಸುಸ್ಥಿತಿಯಲ್ಲಿಡಿ!
ಒಂಟಿತನವನ್ನು ಮೆಟ್ಟಿ ನಿಲ್ಲುವುದು ಕಷ್ಟವೇನಲ್ಲ. ಸ್ವಲ್ಪ ಜಾಗರೂಕತೆ ಮತ್ತು ಧನಾತ್ಮಕ ಚಿಂತನೆಯಿಂದ ನಿಮ್ಮ ಹೃದಯವನ್ನು ಎಂದೆಂದಿಗೂ ಶಕ್ತಿಯುತವಾಗಿಡಬಹುದು:
ಸ್ನೇಹಿತರು, ಕುಟುಂಬದವರು ಮತ್ತು ನೆರೆಹೊರೆಯವರೊಂದಿಗೆ ನಿರಂತರವಾಗಿ ಮಾತನಾಡಿ. ವಾರಕ್ಕೊಮ್ಮೆಯಾದರೂ ಪ್ರೀತಿಪಾತ್ರರ ಜೊತೆ ಸಮಯ ಕಳೆಯಿರಿ.
ದಿನವೂ 30 ನಿಮಿಷಗಳ ನಡಿಗೆ, ಯೋಗ ಅಥವಾ ಧ್ಯಾನ ಮಾಡುವುದರಿಂದ ಮಾನಸಿಕ ಪ್ರಶಾಂತತೆ ಸಿಗುತ್ತದೆ ಮತ್ತು ಹೃದಯದ ಬಡಿತ ಸಮತೋಲನದಲ್ಲಿರುತ್ತದೆ.
ಪುಸ್ತಕ ಓದುವುದು, ಗಿಡ ನೆಡುವುದು, ಸಂಗೀತ ಆಲಿಸುವುದು ಅಥವಾ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳುವುದು ಮನಸ್ಸಿಗೆ ಅತಿಯಾದ ಸಂತೋಷ ನೀಡುತ್ತದೆ.
ಮಾನಸಿಕವಾಗಿ ತುಂಬಾ ಬಳಲಿದಂತೆ ಅನಿಸಿದರೆ ತಜ್ಞ ವೈದ್ಯರು ಅಥವಾ ಆಪ್ತಸಮಾಲೋಚಕರ (Counselor) ನೆರವು ಪಡೆಯಲು ಹಿಂಜರಿಯಬೇಡಿ.
ಹೃದಯಕ್ಕೆ ಪ್ರೀತಿ ಮತ್ತು ಪ್ರಸನ್ನತೆಯೇ ನಿಜವಾದ ಔಷಧ. ಒಂಟಿತನವನ್ನು ದೂರವಿಟ್ಟು, ನಗುತ್ತಾ ಜತೆಗೂಡಿ ಬಾಳಿದರೆ ಆರೋಗ್ಯಕರ ಸುಂದರ ಜೀವನ ನಿಮ್ಮದಾಗುತ್ತದೆ.



