ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಬಾಲಿವುಡ್ ನಟ ಹೃತಿಕ್ ರೋಷನ್ ಜನ್ಮದಿನ. ಈ ದಿನದಂದು ಅಭಿಮಾನಿಗಳಿಗೆ ಹೃತಿಕ್ ಗಿಫ್ಟ್ ನೀಡಿದ್ದಾರೆ.
ಅದೇನೆಂದರೆ ವಿಕ್ರಂ ವೇದಾ ಸಿನಿಮಾದಲ್ಲಿ ಹೃತಿಕ್‌ನ ಫಸ್ಟ್ ಲುಕ್ ರಿವೀಲ್!
ಹೌದು, ಸ್ವಲ್ಪ ಸಮಯದಿಂದ ಸುದ್ದಿಗೇ ಬಾರದ ಹೃತಿಕ್ ಸದ್ದಿಲ್ಲದೇ ಶೂಟ್ ಮಾಡುತ್ತಿದ್ದಾರೆ. ಇದೀಗ ವಿಕ್ರಂ ವೇದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ರಗಢ್ ಲುಕ್‌ನಲ್ಲಿ ಹೃತಿಕ್ ಕಾಣುತ್ತಿದ್ದಾರೆ.
ತಮಿಳ್‌ನಲ್ಲಿ ಈಗಾಗಲೇ ಹಿಟ್ ಆಗಿರೋ ವಿಕ್ರಂ ವೇದ, ಹಿಂದಿಯಲ್ಲೂ ಹಿಟ್ ಆಗಲಿ ಅಂತ ಅಭಿಮಾನಿಗಳು ಆಶಿಸುತ್ತಿದ್ದಾರೆ. ಸಿನಿಮಾದಲ್ಲಿ ಹೃತಿಕ್ ಜೊತೆ ಸೈಫ್ ಅಲಿ ಖಾನ್ ಹಾಗೂ ರಾಧಿಕಾ ಆಪ್ಟೆ ಅಭಿನಯಿಸಿದ್ದಾರೆ.