ಸಮಷ್ಟಿಯ ಹಿತ ನೋಡೋಣ: ಹರಿಪ್ರಕಾಶ ಕೋಣೆಮನೆ

ದಿಗಂತ ವರದಿ ಕಲಬುರಗಿ :

ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿ  ತಮಗಿರುವ ಸವಾಲು ಮತ್ತು ಸಮಷ್ಟಿಯನ್ನು ಗಮನದಲ್ಲಿರಿಸಿಕೊಂಡು ವರದಿ ಮಾಡಲು ಪತ್ರಕರ್ತರು ಬದ್ದರಾಗಬೇಕು ಎಂದು ಹಿರಿಯ ಸಂಪಾದಕ  ಹರಿಪ್ರಕಾಶ ಕೋಣೆಮನೆ ಹೇಳಿದರು.
ಅವರು ಮಂಗಳವಾರ ಕರ್ನಾಟಕ ಕಾರ್ಯನಿರತ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ  36ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಮೊದಲ ಮಾತನಾಡಿದರು.
ಈ ತಲೆಮಾರಿನ ಪತ್ರಕರ್ತರು ಯುದ್ಧ, ತುರ್ತುಪರಿಸ್ಥಿತಿಯಂತಹ ಪ್ರಸಂಗಗಳಲ್ಲಿ ವರದಿ ಮಾಡುವ ಅನುಭವ ಹೊಂದಿಲ್ಲ. ಪತ್ರಕರ್ತನ ಬದ್ಧತೆ , ಕಾರ್ಯಕ್ಷಮತೆಯ ಅರಿವು ಆಗುವುದು ಸವಾಲಿನ ಸ್ಥಿತಿ ಎದುರಾದಾಗ ಮಾತ್ರ. ನಾವು ಪ್ರಸ್ತುತ ಎದುರಿಸಿದ ಅತಿದೊಡ್ಡ ಸವಾಲು ಕೋವಿಡ್ ನದ್ದು. ನಮ್ಮವರನ್ನು ಕಳೆದುಕೊಂಡ ದು:ಖದ ನಡುವೆಯೂ ಈ ಮಾರಕ ಕಾಯಿಲೆಯನ್ನು    ಸಮರ್ಥವಾಗಿ ಎದುರಿಸಿದ್ದೇವೆ. ಜನರಲ್ಲಿ ಅರಿವು ಧೈರ್ಯ ಮೂಡಿಸಿದ್ದೇವೆಂಬ ಅಭಿಮಾನ ನಮಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!