Wednesday, February 21, 2024

ʻಲುಕ್ ಬ್ಯಾಕ್ʼ ಮೈ ಇಂಡಿಯಾ ಟ್ರಿಪ್’: ಭಾರತದ ಪ್ರವಾಸದ ಕುರಿತು ವಿಡಿಯೋ ಹಂಚಿಕೊಂಡ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಭಾರತದ ಪ್ರವಾಸದ ಕುರಿತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ತಮ್ಮ ಸವಿನೆನಪನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್‌ ನಲ್ಲಿ ಹಂಚಿಕೊಂಡಿದ್ದಾರೆ.

ಜನವರಿ 26 ರಂದು ನಡೆದ ಭಾರತದ 75 ನೇ ಗಣರಾಜ್ಯೋತ್ಸವ ಆಚರಣೆಗೆ ಮ್ಯಾಕ್ರನ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು.

ರಾಜಸ್ಥಾನ ರಾಜ್ಯದ ಪ್ರಮುಖ ಪ್ರೇಕ್ಷಣೀಯ ತಾಣವಾದ ಜೈಪುರದಲ್ಲಿ ಅದ್ಭುತ ರೋಡ್ ಶೋನೊಂದಿಗೆ ಪ್ರಾರಂಭವಾದ ಅವರ ಪ್ರವಾಸ ವಿವಿದೆಡೆ ಪ್ರಧಾನಿ ಮೋದಿ ಜೊತೆ ಸಾಗಿದರು.
ಉಭಯ ನಾಯಕರು ಜೈಪುರದ ಜಂತರ್ ಮಂತರ್ ಅನ್ನು ಒಟ್ಟಿಗೆ ವೀಕ್ಷಿಸಿದರು. ಈ ಸ್ಮಾರಕವನ್ನು 1734 ರಲ್ಲಿ ನಿರ್ಮಿಸಲಾಯಿತು ಮತ್ತು ಇದು ವಿಶ್ವದ ಅತಿದೊಡ್ಡ ಕಲ್ಲಿನ ಸನ್ಡಿಯಲ್ ಅನ್ನು ಹೊಂದಿದೆ. ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ.

ಉಭಯ ನಾಯಕರ ಸ್ನೇಹದ ಹೊರತಾಗಿ, ಫ್ರೆಂಚ್ ಅಧ್ಯಕ್ಷರ ಭೇಟಿಯು ರಕ್ಷಣೆ, ಬಾಹ್ಯಾಕಾಶ ಪರಿಶೋಧನೆ, ನಾಗರಿಕ ವಿಮಾನಯಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ, ಸಾರ್ವಜನಿಕ ಆಡಳಿತ ಮತ್ತು ನಗರಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಹಲವಾರು ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!