ಆರೆಸ್ಸೆಸ್ ಹಿರಿಯ ಸ್ವಯಂಸೇವಕ, ಬಿಜೆಪಿ ಧುರೀಣ ಸೋಮಶೇಖರ್ ಭಟ್ ವಿಧಿವಶ

ಹೊಸದಿಗಂತ ವರದಿ, ಮಂಗಳೂರು:

ಆರೆಸ್ಸೆಸ್‌ನ ಹಿರಿಯ ಸ್ವಯಂಸೇವಕ, ಬಿಜೆಪಿಯ ಹಿರಿಯ ನಾಯಕ, ಉಡುಪಿ ಜಿಲ್ಲೆಯ ಖ್ಯಾತ ಉದ್ಯಮಿ ಎಂ . ಸೋಮಶೇಖರ್ ಭಟ್ ಭಾನುವಾರ ರಾತ್ರಿ ವಿಧಿವಶರಾಗಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಬಿಜೆಪಿ ವರಿಷ್ಟರಾದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ, ಎಲ್. ಕೆ.ಆಡ್ವಾಣಿ, ಪ್ರಧಾನಿ ನರೇಂದ್ರ ಮೋದಿ, ಡಾ. ವಿ.ಎಸ್. ಆಚಾರ್ಯ, ಬಿ.ಎಸ್. ಯಡಿಯೂರಪ್ಪ ಮುಂತಾದ ಹಿರಿಯ ನಾಯಕರ ಜೊತೆ ನಿಕಟ ಸಂಪರ್ಕ ಹೊಂದಿದ್ದರು.

ಅವರು ಪತ್ನಿ ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಅಭಿಮಾನಿಗಳು, ಬಂಧುಮಿತ್ರರನ್ನು ಅಗಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!