ಗೋವಾದಲ್ಲಿ ಜನಸಾಗರ: ಹೊಸ ವರ್ಷದ ಜೊತೆ ಕೋವಿಡ್‌ಗೂ ಸ್ವಾಗತ ಕೋರಿದ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೊಸ ವರ್ಷದ ಅದ್ಧೂರಿ ಆಚರಣೆ ಅಂದರೆ ಹಲವರಿಗೆ ಮೊದಲು ಸೂಚಿಸೋ ಜಾಗ ಗೋವಾ!
ಹೌದು, ನ್ಯೂ ಇಯರ್ ಸೆಲೆಬ್ರೇಷನ್‌ಗಾಗಿ ಗುಂಪು ಗುಂಪಿನಲ್ಲಿ ಜನ ಗೋವಾಗೆ ತೆರಳುತ್ತಾರೆ. ಎಷ್ಟೇ ರಶ್ ಇದ್ದರೂ ಕ್ಯಾರೆ ಎನ್ನದೇ ಮೋಜು ಮಸ್ತಿ ಮೂಡ್‌ನಲ್ಲಿ ಇರ‍್ತಾರೆ.

ಈ ಬಾರಿ ಕೊರೋನಾ ಹಾಗೂ ಒಮಿಕ್ರಾನ್ ಭೀತಿಯಿಂದ ಎಲ್ಲೆಡೆ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಗೋವಾದಲ್ಲಿ ಯಾವುದೇ ಭಯ ಇಲ್ಲದೆ ಜನರು ಅದ್ಧೂರಿಯಾಗಿ ಹೊಸ ವರ್ಷವನ್ನು ಆಗಮಿಸಿದ್ದಾರೆ. ಹೊಸ ವರ್ಷವನ್ನು ಆಗಮಿಸಿದ್ದಾರೋ ಅಥವಾ ಕೋವಿಡ್ ಮೂರನೇ ಅಲೆಗೆ ಸ್ವಾಗತ ಕೋರಿದ್ದಾರೋ ಕೆಲವೇ ದಿನಗಳಲ್ಲಿ ತಿಳಿಯಲಿದೆ.

ಗೋವಾದ ಬಾಗಾ ಬೀಚ್‌ನಲ್ಲಿ ಭಾರೀ ಜನಸಂಖ್ಯೆ ಕಾಣಿಸಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ಬಗ್ಗೆ ನೆಟ್ಟಿಗರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಹೊಸ ವರ್ಷದ ಜೊತೆ ಕೋವಿಡ್‌ಗೂ ವೆಲ್‌ಕಂ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!