VIRAL VIDEO| ಕಾರಿನಲ್ಲಿ ಬಂದ ಇಬ್ಬರು ಯುವತಿಯರು ಮಾಡಿದ್ದೇನು ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಂಜಾಬ್‌ನಲ್ಲಿ ನಡೆದ ಕಳ್ಳತನದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮನೆಯೊಂದರ ಹೊರಗಿದ್ದ ಹೂವಿನ ಕುಂಡ ಕಳ್ಳತನವಾಗಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕಳ್ಳತನವನ್ನು ಹೈಪ್ರೊಫೈಲ್ ವ್ಯಕ್ತಿಗಳೇ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.

ಲಕ್ಷಗಟ್ಟಲೆ ಬೆಲೆಬಾಳುವ ಕಾರಿನಲ್ಲಿ ಬಂದ ಯುವತಿಯರಿಬ್ಬರು ಮನೆಯ ಹೊರಗಿದ್ದ ಹೂವಿನ ಕುಂಡ ಕದ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಮೊಹಾಲಿಯ ಸೆಕ್ಟರ್ 78 ರಲ್ಲಿ ಈ ಘಟನೆ ವರದಿಯಾಗಿದೆ.

ಈ ವರ್ಷದ ಆರಂಭದಲ್ಲಿಯೂ ಇಂತಹದ್ದೇ ಘಟನೆ ಬೆಳಕಿಗೆ ಬಂದಿತ್ತು. ದೆಹಲಿ-ಗುರುಗ್ರಾಮ್ ಎಕ್ಸ್‌ಪ್ರೆಸ್‌ವೇನಲ್ಲಿರುವ ಆಂಬಿಯನ್ಸ್ ಮಾಲ್‌ನ ಮುಂಭಾಗದಲ್ಲಿ ಇರಿಸಲಾಗಿದ್ದ ಹೂವಿನ ಕುಂಡಗಳನ್ನು ಇಬ್ಬರು ವ್ಯಕ್ತಿಗಳು ಕದ್ದು ಪರಾರಿಯಾಗಿದ್ದರು. ಜಿ 20 ಶೃಂಗಸಭೆಗೆಂದು ಅಲಂಕರಿಸಲಾಗಿದ್ದ ಹೂವಿನ ಕುಂಡಗಳನ್ನು ಕದ್ದೊಯ್ದಿದ್ದ ಘಟನೆ ವರದಿಯಾಗಿತ್ತು.

https://twitter.com/i/status/1724388262675173609

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!