ಬೇಕಾಗುವ ಸಾಮಾಗ್ರಿಗಳು:
ಚಿಕನ್ – 1 ಕೆ.ಜಿ.
ಈರುಳ್ಳಿ (ಮಧ್ಯಮ ಗಾತ್ರ)-2
ಹಸಿ ಮೆಣಸಿನಕಾಯಿ- 10-15
ಕಾಳು ಮೆಣಸು-2 ಟೀ ಸ್ಪೂನ್
ಟೊಮ್ಯಾಟೊ (ಹುಳಿ)-1/2
ಕೊತ್ತಂಬರಿ ಸೊಪ್ಪು- 1.2 ಕಟ್ಟು
ಲವಂಗ-3
ಚಕ್ಕೆ- ಕಾಲು ಇಂಚು
ಶುಂಠಿ-1 ಇಂಚು
ಬೆಳ್ಳುಳ್ಳಿ- 2
ಎಣ್ಣೆ -5 ಟೇಬಲ್ ಸ್ಪೂನ್
ಉಪ್ಪು
ಅರಿಶಿಣ
ವಿಧಾನ-
ಮೊದಲಿಗೆ ಈರುಳ್ಳಿ, ಹಸಿ ಮೆಣಸಿನಕಾಯಿ, ಕಾಳು ಮೆಣಸು, ಟೊಮ್ಯಾಟೊ, ಕೊತ್ತಂಬರಿ ಸೊಪ್ಪು, ಲವಂಗ, ಚಕ್ಕೆ, ಶುಂಠಿ, ಬೆಳ್ಳುಳ್ಳಿ ಹಾಕಿ ಮಿಕ್ಸಿ ಜಾರ್ನಲ್ಲಿ ರುಬ್ಬಿಕೊಳ್ಳಿ. ಪ್ರೆಶರ್ ಕುಕ್ಕರ್ ಗೆ ಎಣ್ಣೆ ಹಾಕಿ ಕಾದ ನಂತರ, ಅರ್ಧ ಈರುಳ್ಳಿ, ಅರಿಶಿಣ ಮತ್ತು ಉಪ್ಪನ್ನು ಹಾಕಿ ಬೇಯಿಸಿ. ಈಗ ಚಿಕನ್ ಅನ್ನು ಚೆನ್ನಾಗಿ ತೊಳೆದ ನಂತರ ಕುಕ್ಕರ್ ಗೆ ಸೇರಿಸಿ ಹಸಿ ವಾಸನೆ ಹೋಗುವವರೆಗೂ ಬೇಯಿಸಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಇದಕ್ಕೆ ಸೇರಿಸಿ ಎಣ್ಣೆ ಬಿಡುವ ವರೆಗೂ ಬಾಡಿಸಿಕೊಂಡು ೨ ವಿಶಲ್ ನಂತರ ಈಸಿ ಚಿಕನ್ ಚಾಪ್ಸ್ ರೆಡಿ.