September 23, 2026
Wednesday, September 23, 2026
spot_img

ನಕಲಿ ಸಾಫ್ಟ್‌ವೇರ್‌ ಬಳಸಿ ಕೋಟಿ ಕೋಟಿ ಲೂಟಿ : ದೇಶದ 14 ಕಡೆ ದಿಢೀರ್‌ ಇಡಿ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಟೋಲ್‌ ಬೂತ್‌ಗಳಲ್ಲಿ ನಕಲಿ ಸಾಫ್ಟ್‌ವೇರ್‌ ಬಳಕೆ ಮಾಡಿ ಕೋಟಿ ಕೋಟಿ ರೂಪಾಯಿ ಲೂಟಿ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆ ಇಂದು ದೇಶದ ೧೪ ಕಡೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿದ್ದಾರೆ.

ಯಾವ ರೀತಿ ಸ್ಕ್ಯಾಮ್‌?

ನಕಲಿ ಸಾಫ್ಟ್‌ವೇರ್‌ ಒಂದನ್ನು ಸಿದ್ಧಪಡಿಸಿ ನಕಲಿ ರಸೀದಿಗಳನ್ನು ನೀಡಿ ದಂಧೆ ಮಾಡಲಾಗಿದೆ. ಟೋಲ್‌ ಪ್ಲಾಜಾಗಳಲ್ಲಿ ಸಂಗ್ರಹವಾದ ಹಣವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ಖಾತೆಗೆ ಜಮಾ ಮಾಡದೇ ಇತರ ಖಾಸಗಿ ವ್ಯಕ್ತಿಗಳ ಐಡಿ ಹಾಗೂ ಇತರ ಕಂಪನಿಗಳ ಖಾತೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಲಾಗಿದೆ. ಎನ್‌ಎಚ್‌ಎಐ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದಾಗ, ಈ ನಕಲಿ ಸಾಫ್ಟ್‌ವೇರ್ ಬಳಕೆಯಾಗಿರುವುದು ಖಚಿತವಾಗಿದೆ. ಈ ಹಗರಣದ ಹಿಂದೆ ದೊಡ್ಡ ಜಾಲವೇ ಕಾರ್ಯನಿರ್ವಹಿಸಿದ್ದು, ಇದರಲ್ಲಿ ಟೋಲ್ ಗುತ್ತಿಗೆದಾರರ ಪಾತ್ರದ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.

ಎಲ್ಲೆಲ್ಲಿ ಇಡಿ ದಾಳಿ?

ಉತ್ತರ ಪ್ರದೇಶ
ರಾಜಸ್ಥಾನ
ಮಹಾರಾಷ್ಟ್ರ
ಜಮ್ಮು
ಮಧ್ಯಪ್ರದೇಶ
ಕೋಲ್ಕತ್ತಾ
ದೆಹಲಿಯಲ್ಲಿ ದಾಳಿ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !