September 9, 2026
Wednesday, September 9, 2026
spot_img

ವಿಜಯಪುರದಲ್ಲಿ ಲಾರಿ- ಸ್ಕೂಟರ್‌ ಡಿಕ್ಕಿ: ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವು

ಹೊಸದಿಗಂತ ವರದಿ ವಿಜಯಪುರ:

ಲಾರಿ ಹಾಗೂ ಸ್ಕೂಟರ್ ಡಿಕ್ಕಿಯಾಗಿ ಸ್ಕೂಟರ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಇಲ್ಲಿನ ರಾಮನಗರ ಬಳಿ ನಡೆದಿದೆ.

ಮೃತಪಟ್ಟವನನ್ನು ನಿಂಗರಾಜು ಎಂದು ಗುರುತಿಸಲಾಗಿದೆ. ನಿಂಗರಾಜು ಮೂಲತಃ ಮಹಾರಾಷ್ಟ್ರದ ಜತ್ತ ನಿವಾಸಿಯಾಗಿದ್ದು, ಸದ್ಯ ಸಿಂದಗಿ ಬೈಪಾಸ್ ಬಳಿ ವಾಸ ಮಾಡುತ್ತಿದ್ದಾನೆ.

ಈ ದುರ್ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯವೇ ಕಾರಣವೆಂದು ಹೇಳಲಾಗುತ್ತಿದ್ದು, ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ವಿಜಯಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !