ನೆಟ್‌ ಫ್ಲಿಕ್ಸ್ ಗೆ ನಷ್ಟ: ಚಂದಾದಾರನ್ನು ಕಳೆದುಕೊಂಡ ಸ್ಟ್ರೀಮಿಂಗ್‌ ದಿಗ್ಗಜ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮನಿ ಹೇಯ್ಸ್ಟ್‌, ನಾರ್ಕೋಸ್‌, ಸಾಕ್ರೆಡ್ ಗೇಮ್ಸ್‌, ಮುಂತಾದ ಸೂಪರ್‌ ಹಿಟ್‌ ವೆಬ್‌ ಸೀರೀಸ್‌ ಗಳನ್ನು ಹೊರತಂದಿದ್ದ ಸ್ಟ್ರೀಮಿಂಗ್‌ ದಿಗ್ಗಜ ನೆಟ್‌ಫ್ಲಿಕ್ಸ್‌ ದಶಕಗಳಲ್ಲೇ ಮೊದಲಬಾರಿಗೆ ಅತಿ ಹೆಚ್ಚಿನ ನಷ್ಟ ಅನುಭವಿಸಿದೆ. ಕೊರೊನಾ ಪಿಡುಗಿನ ಸಮಯದಲ್ಲಿ ಜನಪ್ರಿಯತೆಗಳಿಸಿದ್ದ ನೆಟ್‌ಫ್ಲಿಕ್ಸ್‌ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಂದಾದಾರರನ್ನು ಕಳೆದುಕೊಂಡು ಹಿನ್ನಡೆ ಅನುಭವಿಸಿದೆ.

ಹಣದುಬ್ಬರ,ಉಕ್ರೇನ್‌ ಯುದ್ಧ ಮತ್ತು ಪ್ರತಿಸ್ಫರ್ಧಿಗಳಿಂದ ಹೆಚ್ಚಿನ ಪೈಪೋಟಿ ಈ ಎಲ್ಲ ಕಾರಣಗಳಿಂದ ನಷ್ಟಕ್ಕೆ ಸಿಲುಕಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ನಷ್ಟವಾಗುವ ಸಂಭವವನ್ನು ಊಹಿಸಲಾಗಿದೆ. 2 ಲಕ್ಷ ಚಂದಾದಾರನ್ನು ಕಳೆದುಕೊಂಡಿರುವುದಾಗಿ ಕಂಪನಿ ಹೇಳಿದ್ದು ವಾಲ್‌ ಸ್ಟ್ರೀಟ್‌ ವರದಿಗಳ ಪ್ರಕಾರ ಮಂಗಳವಾರ ಕಂಪನಿಯ ಶೇರು 26% ನಷ್ಟು ಕುಸಿದಿದೆ. ಒಂದೇದಿನದಲ್ಲಿ40 ಬಿಲಿಯನ್‌ ನಷ್ಟು ತನ್ನ ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡಿದೆ.

ಸ್ಟ್ರೇಂಜರ್ ಥಿಂಗ್ಸ್,ಓಝಾರ್ಕ್ ಮತ್ತು ದಿ ಗ್ರೇ ಮ್ಯಾನ್ ಗಳಂಥಹ ಬಹುನಿರೀಕ್ಷಿತ ಕಂಟೆಂಟ್‌ ಗಳನ್ನು ಬಿಡುಗಡೆ ಮಾಡಿದ್ದರೂ ಕಂಪನಿಯು ಚಂದಾದಾರನ್ನು ಉಳಿಸಿಕೊಳ್ಳಲು ವಿಫಲವಾಗಿದೆ. ಈ ಹಿನ್ನಡೆಯಿಂದ ಕಂಪನಿಯು ತನ್ನ ಚಂದಾದಾರಿಕೆಯ ಮೊತ್ತವನ್ನು ಕಡಿಮೆ ಮಾಡುವ ಕುರಿತು ಯೋಚಿಸುತ್ತಿದೆ ಎನ್ನಲಾಗಿದ್ದು ಉಳಿದ ಅಗ್ಗದ ಸ್ಟ್ರೀಮಿಂಗ್‌ ಕಂಪನಿಗಳಂತೆ ಜಾಹಿರಾತಿನೊಂದಿಗೆ ಕಡಿಮೆ ಬೆಲೆಯ ಆವೃತ್ತಿಗಳನ್ನು ಬಿಡುಗಡೆ ಮಾಡುವ ಕುರಿತು ಚಿಂತಿಸುವಂತಾಗಿದೆ.

ಈ ಕುರಿತು ಕಂಪನಿಯ ಸಿ.ಇ.ಒ ರೀಡ್‌ ಹೇಸ್ಟಿಂಗ್ಸ್‌ “ಗ್ರಾಹಕರ ಆಯ್ಕೆಗೆ ನಾವು ತಲೆಬಾಗಲೇಬೇಕಾಗುತ್ತದೆ. ಜಾಗತಿಕ ಪಿಡುಗು ಕಂಪನಿಯ ಏರಿಳತಕ್ಕೆ ಕಾರಣವಾಗಿದೆ,ಇದರೊಟ್ಟಿಗೆ ಪಾಸ್ವರ್ಡ್‌ ಶೇರಿಂಗ್‌, ಹಚ್ಚಿನ ಪೈಪೋಟಿದಾರರ ಸಂಖ್ಯೆಯು ಕಂಪನಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿದೆ. ಅಕೌಂಟ್‌ ಶೇರಿಂಗ್‌ ಕುರಿತು ಕಠಿಣ ನಿಯಮಗಳನ್ನು ರೂಪಿಸಲಾಗುತ್ತಿದೆ.” ಎಂದು ತಮ್ಮ ಹೂಡಿಕೆದಾರರಿಗೆ ತಿಳಿಸಿದ್ದಾರೆ.‌

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!