ಕೋವಿಡ್‌ ಪ್ರಕರಣಗಳ ಹೆಚ್ಚಳ, 5 ರಾಜ್ಯಗಳಿಗೆ ಕೇಂದ್ರ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ನಾಲ್ಕನೇ ಅಲೆ ಆರಂಭವಾಗೊದ್ಯಾ ಎಂಬ ಅನುಮಾನುಗಳು ಶುರುವಾಗಿವೆ. ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಮಹಾರಾಷ್ಟ್ರ ಮತ್ತು ಮಿಜೋರಾಂ ರಾಜ್ಯಗಳಿಗೆ ಹೆಚ್ಚುತ್ತಿರುವ ಸಕಾರಾತ್ಮಕ ಪ್ರಕರಣಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಲವು ಸೂಚನೆಗಳನ್ನು ನೀಡಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಪತ್ರ ಬರೆದಿದ್ದು, ಕೊರೊನಾ ವೈರಸ್ ಹರಡುವುದನ್ನು ತಡೆಯಲು ಅಗತ್ಯವಿದ್ದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಲಸಿಕೆ ಪ್ರಕ್ರಿಯೆ ಚುರುಕುಗೊಳಿಸಿ, ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯಗೊಳಿಸಬೇಕು, ಸಾಋವಜನಿಕ ಅಂತರ ಕಾಪಾಡಿ, ಜನರಲ್ಲಿಅ ರಿವು ಕಾರ್ಯಕ್ರಮ ಮೂಡಿಸಿ ಎಂದು ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಏಪ್ರಿಲ್ 12 ರಂದು 998 ಇದ್ದ ಪಾಸಿಟಿವ್‌ ಪ್ರಕರಣಗಳು ಏಪ್ರಿಲ್ 19 ಕ್ಕೆ 2,671 ಕ್ಕೆ ಏರಿದೆ, ಹರಿಯಾಣದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,299 ಕ್ಕೆ ಏರಿದೆ. ಉತ್ತರಪ್ರದೇಶ- 637, ಮಿಜೋರಾಂ- 539, ಮಹಾರಾಷ್ಟ್ರ- 693 ಕೇಸ್‌ಗಳು ದಾಖಲಾಗಿವೆ. ಕಳೆದ ವಾರ ತೀರಾ ಕಡಿಮೆಯಿದ್ದ ಪಾಸಿಟಿವಿಟಿ ದರ ಇದ್ದಕ್ಕಿದ್ದಂತೆ ಹೆಚ್ಚಾಗುತ್ತಿದೆ.

ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ ಜಾಗರೂಕರಾಗಿರಲು ಮತ್ತು ಕೋವಿಡ್ ಹರಡುವುದನ್ನು ತಡೆಯಲು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಐದು ರಾಜ್ಯಗಳ ಸರ್ಕಾರಗಳಿಗೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!